ಸ್ಯಾಂಡಲ್ ವುಡ್ ಸುರ ಸುಂದರ ರಮೇಶ್ ಅರವಿಂದ್ ಹುಟ್ಟುಹಬ್ಬಕ್ಕೆ ಶಿವಾಜಿ ಸುರತ್ಕಲ್ 2 ಟೀಸರ್
ರಮೇಶ್ ಅರವಿಂದ್ ಹುಟ್ಟುಹಬ್ಬದ ಅಂಗವಾಗಿ ಶಿವಾಜಿ ಸುರತ್ಕಲ್ 2 ಸಿನಿಮಾದ ಟೀಸರ್ ಇಂದು ಬೆಳಿಗ್ಗೆ 10.01 ಕ್ಕೆ ಲಾಂಚ್ ಆಗುತ್ತಿದೆ.
ಶಿವಾಜಿ ಸುರತ್ಕಲ್ ಎಂಬ ಕ್ರೈಂ ಥ್ರಿಲ್ಲರ್ ಸಿನಿಮಾ ಲಾಕ್ ಡೌನ್ ಗೂ ಮೊದಲು ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿತ್ತು. ಇದೀಗ ಅದೇ ಸಿನಿಮಾದ ಎರಡನೇ ಭಾಗ ಮೂಡಿಬರುತ್ತಿದೆ. ಈ ಬಾರಿ ಶಿವಾಜಿ ಯಾವ ಕೇಸ್ ಹಿಡಿದುಕೊಂಡು ನಿಮ್ಮ ಮುಂದೆ ಬರಲಿದ್ದಾರೆ ಎಂಬ ಝಲಕ್ ಇಂದು ಸಿಗಲಿದೆ.