ಕೊಲೆ ರಹಸ್ಯ ಬೇಧಿಸಲು ಹೊರಟ ರಮೇಶ್ ಅರವಿಂದ್

ಶುಕ್ರವಾರ, 7 ಫೆಬ್ರವರಿ 2020 (09:47 IST)
ಬೆಂಗಳೂರು: ನಟ ರಮೇಶ್ ಅರವಿಂದ್ ಪತ್ತೇದಾರಿಕೆ ಮಾಡಲು ಹೊರಟಿದ್ದಾರೆ. ಅದೂ ಒಂದು ಕೊಲೆಯ ರಹಸ್ಯ ಬೇಧಿಸಲು ಹೊರಟಿದ್ದಾರೆ! ಇದು ರಮೇಶ್ ಅರವಿಂದ್ ಹೊಸ ಸಿನಿಮಾ ಶಿವಾಜಿ ಸುರತ್ಕಲ್ ಟ್ರೈಲರ್ ನಲ್ಲಿ ಪಕ್ಕಾ ಆಗಿದೆ.


ಶಿವಾಜಿ ಸುರತ್ಕಲ್ ಎಂಬ ಪತ್ತೆದಾರಿಕೆ ಆಧಾರಿತ ಕತೆಯುಳ್ಳ ಸಿನಿಮಾವೊಂದು ಫೆಬ್ರವರಿ 21 ರಂದು ಬಿಡುಗಡೆಯಾಗುತ್ತಿದ್ದು, ಈ ಸಿನಿಮಾದ ಟ್ರೈಲರ್ ನಿನ್ನೆಯಷ್ಟೇ ಬಿಡುಗಡೆಯಾಗಿದೆ.

ಟ್ರೈಲರ್ ನೋಡಿದರೆ ರಮೇಶ್ ಅರವಿಂದ್ ಸತ್ಯ-ಸುಳ್ಳುಗಳ ನಡುವೆ, ನಂಬಿಕೆ-ಅಪನಂಬಿಕೆಗಳ ನಡುವೆ ಯಾವುದ ಸರಿ, ಯಾವುದು ತಪ್ಪು ಎಂದು ಪತ್ತೆ ಮಾಡಲು ಪ್ರಯತ್ನ ನಡೆಸುವುದು ಕಂಡುಬರುತ್ತದೆ. ರೋಶನ್ ಎಂಬ ವ್ಯಕ್ತಿಯ ಕೊಲೆಯ ಹಿಂದಿನ ರಹಸ್ಯ ಬೇಧಿಸುವ ಪತ್ತೆದಾರಿ ಅಧಿಕಾರಿಯಾಗಿ ರಮೇಶ್ ಇಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಕುತೂಹಲ ಭರಿತ ಕತೆಯನ್ನು ಅಷ್ಟೇ ಥ್ರಿಲ್ಲಿಂಗ್ ಆಗಿ ತೋರಿಸಲಾಗಿದ್ದು, ಇದೊಂದು ಹೊಸ ಬಗೆಯ ಸಿನಿಮಾ ಎಂಬುದರಲ್ಲಿ ಸಂಶಯವಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ