ಸ್ಯಾಂಡಲ್ ವುಡ್ ಕ್ವೀನ್ ಮತ್ತೆ ಫೀಲಂ ಇಂಡಸ್ಟ್ರೀಗೆ ಎಂಟ್ರಿ ಕೊಡ್ತಾರಾ?

ಮಂಗಳವಾರ, 30 ಆಗಸ್ಟ್ 2022 (18:20 IST)
ಗಣೇಶ್ ಹಬ್ಬದ ದಿನದಂದು ಸ್ಯಾಂಡಲ್ ವುಡ್ ಕ್ವೀನ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಡಲಿದ್ದಾರಂತೆ. ಈ ಕುರಿತು ಇನ್​​​​ಸ್ಟಾಗ್ರಾಮ್​​​​​​ ಪೋಸ್ಟ್ ಮಾಡಿರುವ ಅವರು, ‘ನಾಳೆ 11.15ಕ್ಕೆ ಸಿಹಿ ಸುದ್ದಿ ಕೊಡುವೆ. ಈ ಸುದ್ದಿಯನ್ನು ಕೊಡಲು ನಾನು ಎಕ್ಸೈಟ್ ಆಗಿದ್ದೇನೆ’ ಎಂದು ಅವರು ಬರೆದುಕೊಂಡಿದ್ದಾರೆ. ರಮ್ಯಾ ಸಿನಿಮಾ ರಂಗಕ್ಕೆ ಕಮ್ ಬ್ಯಾಕ್ ಆಗಲು ತುದಿಗಾಲಲ್ಲಿ ನಿಂತಿದ್ದಾರೆ. ಕಳೆದೊಂದು ವರ್ಷದಿಂದ ಅವರು ಸಿನಿಮಾ ರಂಗಕ್ಕೆ ವಾಪಸ್ಸಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಬಹುಶಃ ಅದೇ ಸುದ್ದಿಯನ್ನೇ ನಾಳೆ ಅಭಿಮಾನಿಗಳಿಗೆ ಕೊಡಲಿದ್ದಾರೆ ಎನ್ನುವುದು ಹಲವರ ಊಹೆ. ಅನೇಕ ದಿನಗಳಿಂದ ಅವರು ಸಿನಿಮಾ ಸಂಬಂಧಿ ನಾನಾ ರೀತಿಯ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಮೂಲಗಳ ಪ್ರಕಾರ ರಾಜ್ ಬಿ ಶೆಟ್ಟಿ ನಿರ್ದೇಶಿಸಿ ನಟಿಸಲಿರುವ ಸಿನಿಮಾವನ್ನು ರಮ್ಯಾ ಅವರು ನಿರ್ಮಾಣ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ, ಇದೇ ಸಿನಿಮಾದಲ್ಲಿ ಅವರು ಪಾತ್ರವನ್ನೂ ಮಾಡಲಿದ್ದಾರಂತೆ. ಬಹುಶಃ ನಾಳೆ ಅದೇ ಸಿಹಿ ಸುದ್ದಿಯನ್ನು ಅವರು ಅಭಿಮಾನಿಗಳಿಗೆ ಕೊಡಬಹುದು ಎನ್ನಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ