ಲವ್ 360 ಸಿನಿಮಾಗೆ ಪರಭಾಷೆಯಿಂದ ಭರ್ಜರಿ ಬೇಡಿಕೆ
ರಚನಾ ಇಂದರ್-ಪ್ರವೀಣ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಲವ್ 360 ಸಿನಿಮಾದ ತೆಲುಗು, ತಮಿಳು ರಿಮೇಕ್ ರೈಟ್ಸ್ ಗೆ ಭರ್ಜರಿ ಬೇಡಿಕೆ ಬಂದಿದೆಯಂತೆ. ಈ ಸುದ್ದಿಯನ್ನು ಸ್ವತಃ ಚಿತ್ರತಂಡದವರೇ ಹಂಚಿಕೊಂಡಿದ್ದಾರೆ.
ಮುಗ್ಧ ಪ್ರೇಮಕತೆಯೊಂದರ ಹಿನ್ನಲೆಯ ಈ ಸಿನಿಮಾದ ಹಾಡು ಜಗವೇ ನೀನು ಗೆಳತಿಯೆ ಹಾಡು ಭರ್ಜರಿ ಹಿಟ್ ಆಗಿತ್ತು. ಸಿನಿಮಾ ಬಗ್ಗೆ ಒಳ್ಳೆ ವಿಮರ್ಶೆ ಕೇಳಿಬಂದಿತ್ತು. ಇದೀಗ ಪರಭಾಷೆಯಿಂದಲೂ ಬೇಡಿಕೆ ಬಂದಿರುವುದು ಹೆಗ್ಗಳಿಕೆಯ ಸಂಗತಿ.