ಈ ನಟಿಗೆ ನಾನೇ ಅಡ್ಡಗಾಲಾಗುತ್ತಿದ್ದೆ: ಪಶ್ಚಾತ್ತಾಪಪಟ್ಟುಕೊಂಡ ರಮ್ಯಾ!

ಭಾನುವಾರ, 24 ಅಕ್ಟೋಬರ್ 2021 (10:05 IST)
ಬೆಂಗಳೂರು: ನಟಿ ರಮ್ಯಾ ಸ್ಯಾಂಡಲ್ ವುಡ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೇ ಇರಬಹುದು. ಆದರೆ ಸಿನಿಮಾ ಮಂದಿಯೊಂದಿಗೆ ತಮ್ಮ ನಂಟು ಇಟ್ಟುಕೊಂಡಿದ್ದಾರೆ.

ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗಿರುವ ಡಾಲಿ ಧನಂಜಯ್ ನಾಯಕರಾಗಿರುವ ರತ್ನನ್ ಪ್ರಪಂಚ ಸಿನಿಮಾ ವೀಕ್ಷಿಸಿದ ರಮ್ಯಾ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯಾಗುವಂತೆ ತಮ್ಮನ್ನು ಮೊದಲು ಚಿತ್ರತಂಡ ಸಂಪರ್ಕಿಸಿತ್ತು. ಆದರೆ ನಾನು ಒಪ್ಪಿರಲಿಲ್ಲ ಎಂದೂ ರಮ್ಯಾ ಹೇಳಿದ್ದಾರೆ.

ಸಿನಿಮಾ ವೀಕ್ಷಿಸಿದ ಬಳಿಕ ತಮ್ಮ ಅಭಿಪ್ರಾಯ ಹಂಚಿಕೊಂಡ ರಮ್ಯಾ, ಒಂದು ಈ ವೇಳೆ ಈ ಸಿನಿಮಾದಲ್ಲಿ ನಟಿಸಲು ನಾನು ಒಪ್ಪಿಕೊಂಡಿದ್ದರೆ ರೆಬಾ ಮೊನಿಕಾ ಸಿನಿಮಾ ಪದಾರ್ಪಣೆಗೆ ನಾನೇ ಅಡ್ಡಗಾಲು ಹಾಕಿದಂತಾಗುತ್ತಿತ್ತು ಎಂದಿದ್ದಾರೆ. ರತ್ನನ್ ಪ್ರಪಂಚ ಸಿನಿಮಾದಲ್ಲಿ ನಾಯಕಿ ಪಾತ್ರ ಮಾಡಿದ ನವ ನಟಿ ರೆಬಾ ಮೊನಿಕಾ ಅಭಿನಯವನ್ನು ರಮ್ಯಾ ಕೊಂಡಾಡಿದ್ದಾರೆ. ನವ ನಟಿಯಾದರೂ ಮನೋಜ್ಞ ಅಭಿನಯ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ