ಆತ್ಮಹತ್ಯೆಗೆ ಚಿಂತಿಸಿದ್ದ ರಮ್ಯಾ! ರಾಹುಲ್ ಗಾಂಧಿ ತಮ್ಮ ಜೊತೆಗೆ ಹೇಗಿದ್ದರು ಎಂಬುದನ್ನು ಬಿಚ್ಚಿಟ್ಟ ಕ್ವೀನ್

ಸೋಮವಾರ, 27 ಮಾರ್ಚ್ 2023 (09:33 IST)
ಬೆಂಗಳೂರು: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನಟಿ ರಮ್ಯಾ ತಮ್ಮ ಜೀವನದ ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

ಮಂಡ್ಯ ಲೋಕಸಭೆಗೆ ಸಂಸದೆಯಾಗಿ ಚುನಾವಣೆ ಎದುರಿಸುವಾಗ ತಮ್ಮ ಪರಿಸ್ಥಿತಿ ಹೇಗಿತ್ತು ಎಂಬುದನ್ನು ರಮ್ಯಾ ವಿವರಿಸಿದ್ದಾರೆ. ರಮ್ಯಾ ಆಗಷ್ಟೇ ತಂದೆಯನ್ನು ಕಳೆದುಕೊಂಡ ದುಃಖದಲ್ಲಿದ್ದರು.

‘ನಮ್ಮ ತಂದೆಯನ್ನು ಕಳೆದುಕೊಂಡಾಗ ಜೀವನವೇ ಬೇಡ ಎನಿಸಿತ್ತು. ಈ ಜೀವನವನ್ನೇ ಕೊನೆಗೊಳಿಸೋಣ ಎಂದುಕೊಂಡಿದ್ದೆ. ಆದರೆ ಮಂಡ್ಯ ಜನರ ಪ್ರೀತಿ, ಬೆಂಬಲ ನನಗೆ ಸಿಕ್ಕಿತು. ನನ್ನ ದುಃಖವನ್ನೆಲ್ಲಾ ಚುನಾವಣೆಗಾಗಿ ಪರಿಶ್ರಮದ ರೂಪದಲ್ಲಿ ಹೊರಹಾಕಿದೆ. ಆ ಸಂದರ್ಭದಲ್ಲಿ ನನಗೆ ರಾಹುಲ್ ಗಾಂಧೀಜಿ ತುಂಬಾ ಬೆಂಬಲ ಕೊಟ್ಟರು. ನಾನು ಯಾಕೆ ಬದುಕಬೇಕು, ನಮ್ಮ ಬದುಕಿನ ಉದ್ದೇಶ ಏನು ಎಂಬ ಸ್ಥಿತಿಗೆ ತಲುಪಿದ್ದೆ. ನನಗೆ ಭಾವನಾತ್ಮಕವಾಗಿ ಬೆಂಬಲವಾಗಿ ನಿಂತವರು ರಾಹುಲ್ ಜೀ’ ಎಂದಿದ್ದಾರೆ ರಮ್ಯಾ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ