ಎರಡು ತಿಂಗಳಾಯ್ತು! ಹರಿಪ್ರಿಯಾ ಜೊತೆಗಿನ ಫೋಟೋ ಹಂಚಿಕೊಂಡ ವಸಿಷ್ಠ
ಇತ್ತೀಚೆಗಷ್ಟೇ ಹರಿಪ್ರಿಯಾ ಗರ್ಭಿಣಿ ಎನ್ನುವ ವದಂತಿ ಹಬ್ಬಿತ್ತು. ಆದರೆ ಬಳಿಕ ಅದು ಸುಳ್ಳು ಎಂದು ಗೊತ್ತಾಗಿತ್ತು. ಇದೀಗ ವಸಿಷ್ಠ ಹರಿಪ್ರಿಯಾ ಜೊತೆಗೆ ಬಿರಿಯಾನಿ ಸವಿಯುವ ಫೋಟೋ ಹಂಚಿಕೊಂಡು ಎರಡು ತಿಂಗಳಾಯ್ತು ತಮ್ಮ ವೈವಾಹಿಕ ಜೀವನಕ್ಕೆ ಎಂದು ಖುಷಿ ಹಂಚಿಕೊಂಡಿದ್ದಾರೆ.
ವಸಿಷ್ಠ ಸಿಂಹ ಸದ್ಯಕ್ಕೆ ತೆಲುಗು ಸಿನಿಮಾ ಶೂಟಿಂಗ್ ಗಾಗಿ ತೆಲಂಗಾಣದಲ್ಲಿದ್ದಾರೆ. ಆದರೆ ಈ ವಿಶೇಷ ದಿನಕ್ಕೆ ಗಂಡನ ಜೊತೆಗಿರಲು ತೆಲಂಗಾಣಕ್ಕೆ ತೆರಳಿದ್ದಾರೆ. ಅಷ್ಟೇ ಅಲ್ಲ, ಮನೆ ಆಹಾರ ಮಿಸ್ ಮಾಡುತ್ತಿದ್ದ ಗಂಡನಿಗೆ ಸ್ವತಃ ತಾವೇ ಕೈಯಾರೆ ಅಡುಗೆ ಮಾಡಿದ್ದಲ್ಲದೆ, ಇಡೀ ಚಿತ್ರತಂಡಕ್ಕೇ ಅಡುಗೆ ಮಾಡಿ ಬಡಿಸಿದ್ದಾರಂತೆ. ಈ ವಿಚಾರವನ್ನು ವಸಿಷ್ಠ ಖುಷಿಯಿಂದಲೇ ಹಂಚಿಕೊಂಡಿದ್ದಾರೆ.