ಹೆಡ್ ಬುಷ್ ಈವೆಂಟ್ ನಲ್ಲಿ ಸೀರೆಯುಟ್ಟು ಮಿಂಚಿದ ರಮ್ಯಾ, ಡ್ಯಾನ್ಸ್ ಮೂಲಕ ಗಮನ ಸೆಳೆದ ರಚಿತಾ

ಸೋಮವಾರ, 17 ಅಕ್ಟೋಬರ್ 2022 (09:00 IST)
Photo Courtesy: Twitter
ದಾವಣಗೆರೆ: ಡಾಲಿ ಧನಂಜಯ್ ಅಭಿನಯದ ಹೆಡ್ ಬುಷ್ ಸಿನಿಮಾದ ಪ್ರಿ ರಿಲೀಸ್ ಈವೆಂಟ್ ನಿನ್ನೆ ದಾವಣಗೆರೆಯಲ್ಲಿ ಅದ್ಧೂರಿಯಾಗಿ ನೆರವೇರಿದೆ.

ಈ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ, ಡಿಂಪಲ್ ಕ್ವೀನ್ ರಚಿತಾ ರಾಮ್ ಅತಿಥಿಗಳಾಗಿ ಆಗಮಿಸಿದ್ದರು. ರಮ್ಯಾ ಮತ್ತು ರಚಿತಾರನ್ನು ನೋಡಲೆಂದೇ ಅಭಿಮಾನಿಗಳು ಸೇರಿದ್ದರು.

ಸೀರೆಯುಟ್ಟು ಮಿಂಚುತ್ತಿದ್ ರಮ್ಯಾರನ್ನು ನೋಡಿದ ಅಭಿಮಾನಿಗಳ ಸಂಭ್ರಮ ಮೇರೆ ಮೀರಿತ್ತು. ಇಬ್ಬರು ಅಭಿಮಾನಿಗಳನ್ನು ವೇದಿಕೆಗೆ ಕರೆದು ರಮ್ಯಾ ಅವರನ್ನು ಪ್ರೀತಿಯಿಂದ ತಬ್ಬಿಕೊಂಡಿದ್ದು ಬಳಿಕ ಸೆಲ್ಫೀಗೆ ಪೋಸ್ ಕೊಟ್ಟರು. ಇನ್ನು ರಚಿತಾ ರಾಮ್ ಕೂಡಾ ಬಿಂದಾಸ್ ಆಗಿ ಡ್ಯಾನ್ಸ್ ಮಾಡಿ ಅಭಿಮಾನಿಗಳನ್ನು ರಂಜಿಸಿದರು.

-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ