ಸಿನಿಮಾ ರಿ-ಎಂಟ್ರಿ ಬಗ್ಗೆ ಸುಳಿವು ಕೊಟ್ಟ ಬೆನ್ನಲ್ಲೇ ವೈರಲ್ ಆಯ್ತು ರಮ್ಯಾ ರೀಲ್ಸ್
ಆಪರೇಷನ್ ಬಳಿಕ ದೇಹ ತೂಕ ಹೆಚ್ಚಾಗಿದೆ. ಹೀಗಾಗಿ ತೂಕ ಇಳಿಸಿಕೊಳ್ಳಲು ವರ್ಕೌಟ್ ಮಾಡುತ್ತಿದ್ದೇನೆ. ಸದ್ಯಕ್ಕೆ ಕೆಲವು ಸ್ಕ್ರಿಪ್ಟ್ ಓದುತ್ತಿದ್ದೇನೆ. ಫಿಟ್ ಆದ ಬಳಿಕ ಮತ್ತೆ ಸಿನಿಮಾ ಬಗ್ಗೆ ನಿಮಗೆ ಹೊಸ ಸುದ್ದಿ ಕೊಡಲಿದ್ದೇನೆ ಎಂದಿದ್ದರು. ರಮ್ಯಾರ ಈ ಹೇಳಿಕೆ ಅವರ ಅಭಿಮಾನಿಗಳಲ್ಲಿ ಥ್ರಿಲ್ ಮೂಡಿಸಿತ್ತು.
ಇದರ ಬೆನ್ನಲ್ಲೇ ರಮ್ಯಾ ತಮ್ಮ ಇನ್ ಸ್ಟಾಗ್ರಾಂನಲ್ಲಿ ರೀಲ್ಸ್ ಒಂದಕ್ಕೆ ತಮ್ಮ ಗೆಳೆಯರ ಬಳಗದ ಜೊತೆ ಹೆಜ್ಜೆ ಹಾಕಿರುವ ವಿಡಿಯೋ ಪ್ರಕಟಿಸಿದ್ದಾರೆ. ಬಹಳ ದಿನಗಳ ನಂತರ ರಮ್ಯಾ ಡ್ಯಾನ್ಸ್ ನೋಡಿ ಅಭಿಮಾನಿಗಳೂ ಸಖತ್ ಖುಷಿಪಟ್ಟಿದ್ದಾರೆ.