ಹಿರಿಯ ನಟ ಅಶೋಕ್ ರಾವ್ ಕ್ಯಾನ್ಸರ್ ನಿಂದ ನಿಧನ
ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಅವರು ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ತಡರಾತ್ರಿ 12.30 ಕ್ಕೆ ನಿಧನರಾಗಿದ್ದಾರೆ.
ವಿಲನ್ ಪಾತ್ರಗಳಲ್ಲೇ ಮಿಂಚುತ್ತಿದ್ದ ಅಶೋಕ್ ರಾವ್ ಕಂಚಿನ ಕಂಠದಿಂದಾಗಿ ಎಲ್ಲರ ಗಮನ ಸೆಳೆಯುತ್ತಿದ್ದರು. ಡಾ.ರಾಜ್ ಕುಮಾರ್ ಅವರ ಪರಶುರಾಮ್ ಸಿನಿಮಾದ ವಿಲನ್ ಪಾತ್ರದಲ್ಲಿ ಅವರನ್ನು ಇಂದಿಗೂ ಜನ ಗುರುತಿಸುತ್ತಾರೆ. ಹಳೆಯ ತಲೆಮಾರಿನ ನಟರಿಂದ ಹಿಡಿದು ಇತ್ತೀಚೆಗಿನ ನಟರವರೆಗೆ ನಟಿಸಿದ ಹಿರಿಮೆ ಅವರದ್ದು. ತಮ್ಮ ವೃತ್ತಿ ಜೀವನದಲ್ಲಿ ಸುಮಾರು 100 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಇಂದು ಅವರ ನಿಧನಕ್ಕೆ ಸ್ಯಾಂಡಲ್ ವುಡ್ ಕಂಬನಿ ಮಿಡಿಯುತ್ತಿದೆ.