ಅಜ್ಜಿಯರಿಗಾಗಿ ಕನ್ನಡ ಮಾತಾಡ್ತೀನಿ: ಟ್ರೋಲ್ ಬಳಿಕ ರಮ್ಯಾ ಹೇಳಿಕೆ
ಈ ಹಿಂದೆ ಜೀ ಕನ್ನಡ ಮುಖ್ಯಸ್ಥ ರಾಘವೇಂದ್ರ ಹುಣಸೂರು ಡಾ. ಬ್ರೋ ಕರೆಸಿಕೊಳ್ತೀರಾ ಎಂದು ಪ್ರಶ್ನೆ ಕೇಳಿದ ವರದಿಗಾರನಿಗೆ ನಿಮ್ಮ ಅಜ್ಜಿಗೆ ಡಾ. ಬ್ರೋ ಗೊತ್ತಾ ಎಂದು ಕುಹುಕವಾಡಿದ್ದರು. ಇದನ್ನೇ ಮುಂದಿಟ್ಟುಕೊಂಡು ನೆಟ್ಟಿಗರು ರಮ್ಯಾ ಮಾತನಾಡಿದ್ದು ನಮ್ಮ ಅಜ್ಜಿಗೆ ಅರ್ಥವಾಗಿಲ್ಲ ಎಂದು ಕಾಲೆಳೆದಿದ್ದರು.
ಈ ಟ್ರೋಲ್ ಗಳಿಗೆ ಉತ್ತರಿಸಿರುವ ರಮ್ಯಾ ಕಾರ್ಯಕ್ರಮದ ಅತಿಥಿಗಳು ಕನ್ನಡಿಗರಾಗಿರಲಿಲ್ಲ. ಹೀಗಾಗಿ ಎಲ್ಲರಿಗೂ ಅರ್ಥವಾಗಲು ಪ್ರಯತ್ನಪಟ್ಟೆ. ಮುಂದಿನ ಕಾರ್ಯಕ್ರಮದಲ್ಲಿ ಮುದ್ದು ಅಜ್ಜಿಯಂದಿರಿಗೆ ಅರ್ಥವಾಗುವ ಭಾಷೆಯಲ್ಲಿ ಮಾತನಾಡುತ್ತೇನೆ ಎಂದಿದ್ದಾರೆ.