ಅರರೇ...!! ರಕ್ಷಿತಾ ಪ್ರೇಮ್ ಮೇಲೆ ರಮ್ಯಾಗೆ ಅದೆಂಥಾ ಲವ್ವು?!

ಬುಧವಾರ, 31 ಮಾರ್ಚ್ 2021 (10:34 IST)
ಬೆಂಗಳೂರು: ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ನಲ್ಲಿ ಕೋಳಿಜಗಳ ಮಾಡುತ್ತಿದ್ದ ರಕ್ಷಿತಾ ಪ್ರೇಮ್ ಮತ್ತು ರಮ್ಯಾ ಈಗ ಫ್ರೆಂಡ್ಸ್ ಆಗಿದ್ದಾರೆ. ಇದಕ್ಕೆ ಸಾಕ್ಷಿ ರಮ್ಯಾ ಇಂದು ರಕ್ಷಿತಾಗೆ ಜನ್ಮದಿನ ಸಂದೇಶ ನೀಡಿದ ಪರಿ.


ರಕ್ಷಿತಾ ಜೊತೆಗಿರುವ ಹಳೆಯ ಫೋಟೋವೊಂದನ್ನು ಪ್ರಕಟಿಸಿರುವ ರಮ್ಯಾ ನೀನಿಲ್ಲದೇ ನನ್ನ ಸಿನಿ ಜೀವನವೇ ಪೂರ್ತಿಯಾಗಲ್ಲ ಎಂದು ಫುಲ್ ಲವ್ವು ಪ್ರದರ್ಶಿಸಿದ್ದಾರೆ.

‘ಹ್ಯಾಪೀ ಹ್ಯಾಪೀ ಬರ್ತ್ ಡೇ ರಕ್ಷಿತಾ. ನೀನಿಲ್ಲದೇ ನನ್ನ ಸಿನಿಮಾ ಪಯಣ ಪೂರ್ತಿಯಾಗದು. ಎಷ್ಟು ತಮಾಷೆಗಳಿದ್ದವು ಮತ್ತು ಎಷ್ಟು ಡ್ರಾಮಾ ಇತ್ತು? ನಿನಗೆ ಹೃದಯಪೂರ್ವಕವಾಗಿ ನನ್ನ ಪ್ರೀತಿ, ಹಾರೈಕೆಯಿರುತ್ತದೆ. ಜೊತೆಗೊಂದು ಕಿಸ್. ಈ ಫೋಟೋ ಕೂಡಾ ನನಗೆ ಯಾವತ್ತೂ ಸ್ಪೆಷಲ್’ ಎಂದು ರಮ್ಯಾ ಬರೆದಿದ್ದಾರೆ.

ಇತ್ತೀಚೆಗೆ ರಮ್ಯಾ ಇನ್ ಸ್ಟಾಗ್ರಾಂನಲ್ಲಿ ಮತ್ತೆ ಸಕ್ರಿಯಳಾದ ಬಳಿಕ ಇಬ್ಬರೂ ನಟಿಯರು ಪರಸ್ಪರ ಫೋಟೋಗಳಿಗೆ ಲೈಕ್ ಕೊಡುವುದು, ಕಾಮೆಂಟ್ ಮಾಡುವುದು ನಡೆದಿತ್ತು. ಈಗ ರಮ್ಯಾ ಬರ್ತ್ ಡೇ ಸಂದೇಶ ಬರೆದಿರುವ ಪರಿ ನೋಡಿದ ಮೇಲಂತೂ ನೆಟ್ಟಿಗರು ಫುಲ್ ಖುಷಿಯಾಗಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ