ಕಬ್ಜ ಟೀಸರ್ ಲಾಂಚ್ ಗೆ ಬಂದ ತೆಲುಗು ನಟ ರಾಣಾ ದಗ್ಗುಬಟ್ಟಿ

ಶನಿವಾರ, 17 ಸೆಪ್ಟಂಬರ್ 2022 (17:48 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿರುವ ಆರ್. ಚಂದ್ರು ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಟೀಸರ್ ಇಂದು ಅದ್ಧೂರಿಯಾಗಿ ಲಾಂಚ್ ಆಗುತ್ತಿದೆ.

ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ತೆಲುಗು ಸ್ಟಾರ್ ನಟ ರಾಣಾ ದಗ್ಗುಬಟ್ಟಿ ಆಗಮಿಸಿದ್ದು, ಚಿತ್ರಕ್ಕೆ ಶುಭ ಕೋರಿದ್ದಾರೆ.

ಇನ್ನು ಟೀಸರ್ ಗಮನಿಸಿದರೆ ಕಬ್ಜ ಕೂಡಾ ಕೆಜಿಎಫ್ ನಂತೇ ಕನ್ನಡ ಸಿನಿಮಾವನ್ನು ಪರಭಾಷಿಗರೂ ತಲೆಯೆತ್ತಿ ನೋಡುವಂತಾಗುವುದರಲ್ಲಿ ಅನುಮಾನವಿಲ್ಲ. ಭರ್ಜರಿ ಸೆಟ್ ಗಳಲ್ಲಿ 1980 ರ ದಶಕದ ಕತೆಯನ್ನು ಚಿತ್ರಿಸಲಾಗಿದೆ. ಟೀಸರ್ ಗೆ ಭಾರೀ ಪ್ರತಿಕ್ರಿಯೆ ಕಂಡುಬರುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ