ಫುಟ್ ಬಾಲ್ ಆಡಿದ ರಣವೀರ್ ಸಿಂಗ್
ಮುಂಬೈ: ಬಾಲಿವುಡ್ ತಾರೆ ರಣವೀರ್ ಸಿಂಗ್ ಮುಂಬೈಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಫುಟ್ ಬಾಲ್ ತಾರೆ ಥೈರಿ ಹೆನ್ರಿ ಜತೆ ಫುಟ್ ಬಾಲ್ ಆಡಿದ್ದಾರೆ.
ತಾನು ರಾಯಭಾರಿಯಾಗಿರುವ ಕ್ರೀಡಾ ಸಂಸ್ಥೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಕ್ಕಳ ಜತೆ ಹೆನ್ರಿ ಆಟವಾಡಿ ಮಜಾ ಪಡೆದರು. ನಂತರ ನಡೆದ ಕಾರ್ಯಕ್ರಮದಲ್ಲಿ ಹೆನ್ರಿಗೆ ರಣವೀರ ಜತೆಯಾದರು.
ರಣವೀರ್ ಸದ್ಯ ಸಂಜಯ್ ಲೀಲಾ ಬನ್ಸಾಲಿ ಅವರ ಪದ್ಮಾವತಿ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದರಲ್ಲಿ ಶಾಹೀದ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ಅಭಿನಯಿಸುತ್ತಿದ್ದಾರೆ.