ಬಹುಭಾಷೆ ಸಿನಿಮಾಗೆ ನಾಯಕಿಯಾದ ಪುಟ್ಟಗೌರಿ ಧಾರವಾಹಿ ಖ್ಯಾತಿಯ ರಂಜಿನಿ

ಗುರುವಾರ, 28 ನವೆಂಬರ್ 2019 (10:01 IST)
ಬೆಂಗಳೂರು: ಪುಟ್ಟಗೌರಿ ಮದುವೆ ಧಾರವಾಹಿ ಖ್ಯಾತಿ ರಂಜಿನಿ ರಾಘವನ್ ಸದ್ದಿಲ್ಲದೇ ಸಿನಿಮಾದಲ್ಲಿ ಬ್ಯುಸಿಯಾಗುತ್ತಿದ್ದಾರೆ. ಟಕ್ಕರ್ ಸಿನಿಮಾ ಮುಗಿದ ಬಳಿಕ ರಂಜಿನಿ ಇದೀಗ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ.


ವಿಶೇಷವೆಂದರೆ ಇದು ಕೇವಲ ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲೂ ಬಿಡುಗಡೆಯಾಗಲಿದೆ. ಸತ್ಯಂ ಎನ್ನುವ ಹೊಸ ಸಿನಿಮಾದಲ್ಲಿ ರಂಜಿನಿ ನಾಯಕಿಯಾಗುತ್ತಿದ್ದಾರೆ. ಸಂತೋಷ್ ನಾಯಕರಾಗಿರುವ ಸಿನಿಮಾವನ್ನು ಅಶೋಕ್ ಕೆ ಕಡಬ ನಿರ್ದೇಶಿಸುತ್ತಿದ್ದು, ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ಸಂಯೋಜಿಸಲಿದ್ದಾರೆ.

ಇದೊಂದು ರೀತಿಯಲ್ಲಿ ಥ್ರಿಲ್ಲರ್ ಸಿನಿಮಾ ಎನ್ನಲಾಗಿದೆ. ಹೀಗಾಗಿ ರಂಜಿನಿಗೆ ಇದು ಸವಾಲಿನ ಪಾತ್ರವಾಗಲಿದೆ. ಈ ಸಿನಿಮಾ ಮೂಲಕ ತಮಗೆ ಬ್ರೇಕ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ರಂಜಿನಿ ಇದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ