Rape Case: ಮಡೆನೂರು ಮನು 31 ಚಾಟಿಂಗ್ ಡಿಟೇಲ್ಸ್ ಪಡೆದ ಖಾಕಿ, ಹಲವು ನಟ ನಟಿಯರಿಗೂ ಸಂಕಷ್ಟ

Sampriya

ಭಾನುವಾರ, 25 ಮೇ 2025 (16:59 IST)
ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಕಾಮಿಡಿ ಕಿಲಾಡಿಗಳು ನಟ ಮಡೆನೂರು ಮನು ಪ್ರಕರಣದ ತನಿಖೆಯನ್ನು ನಡೆಸುತ್ತಿವ ಪೊಲೀಸರು, ಈಗಾಗಲೇ 31 ತಿಂಗಳ ಚಾಟಿಂಗ್‌ ಡಿಟೇಲ್ಸ್‌ ಅನ್ನು ರಿಕವರಿ ಮಾಡಿದ್ದಾರೆ.

ಸಂತ್ರಸ್ತ ಸಹಕಲಾವಿದೆ ನೀಡಿದ ದೂರಿನಲ್ಲಿ ಆರೋಪಿ ನವೆಂಬರ್‌ 2022ರಿಂದ ಮೇ  2025ರ ವರೆಗೆ ತನ್ನ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿದ್ದಾರೆ.

ದೂರಿನಲ್ಲಿ ಮದುವೆ ಹೆಸರಿನಲ್ಲಿ ಅತ್ಯಾಚಾರ ಎಸಗಿ ದೈಹಿಕ ಹಲ್ಲೆ ಮಾಡಿ ಜೀವಬೆದರಿಕೆ ಹಾಕಿದ್ದಾರೆಂದು ಉಲ್ಲೇಖಿಸಿದ್ದರು. ಪ್ರಕರಣ ಸಂಬಂಧ ಆರೋಪಿ ಮಡೆನೂರು ಮನುವನ್ನು ಪೊಲೀಸರು ಕಸ್ಟಡಿಗೆ ಪಡೆದು ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ನಟನ 2 ಮೊಬೈಲ್ ಹಾಗೂ ಸಂತ್ರಸ್ತೆಯ 2 ಫೋನ್ ವಶಕ್ಕೆ ಪಡೆದು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. ಇನ್ನು ಸಂತ್ರಸ್ತೆ ಹಾಗೂ ನಟನ ನಡುವಿನ ಆಡಿಯೋ, ವೀಡಿಯೋ ಸಂಭಾಷಣೆಯಲ್ಲಿ ಹಲವು ನಟ, ನಟಿಯರ ಹೆಸರು ಕೇಳಿಬಂದಿದೆ. ಈ ಹಿನ್ನೆಲೆ ಪೊಲೀಸರು ತನಿಖೆಯ ಭಾಗವಾಗಿ ಕೆಲ ಕಿರುತೆರೆ ನಟ, ನಟಿ ಸೇರಿ ಸಿನಿತಾರೆಯರ ಹೇಳಿಕೆ ದಾಖಲಿಸಲು ಸಿದ್ಧತೆ ನಡೆಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ