Madenur Manu: ಸಂತ್ರಸ್ತ ನಟಿಯ ಮನೆಗೇ ಮಡೆನೂರು ಮನುವನ್ನು ಕರೆದುಕೊಂಡು ಬಂದ ಪೊಲೀಸರು

Krishnaveni K

ಶನಿವಾರ, 24 ಮೇ 2025 (15:24 IST)
ಬೆಂಗಳೂರು: ರೇಪ್ ಕೇಸ್ ನಲ್ಲಿ ಅರೆಸ್ಟ್ ಆಗಿರುವ ನಟ ಮಡೆನೂರು ಮನಿವನ್ನು ಇಂದು ಪೊಲೀಸರು ಇಂದು ಸಂತ್ರಸ್ತೆಯ ಮನೆಗೆ ಕರೆದುಕೊಂಡು ಬಂದಿದ್ದಾರೆ.

ಮಡೆನೂರು ಮನು ನನ್ನ ಮೇಲೆ ಅತ್ಯಾಚಾರ ನಡೆಸಿ ಬಲವಂತವಾಗಿ ತಾಳಿ ಕಟ್ಟಿ ಹಲ್ಲೆಯನ್ನೂ ನಡೆಸಿದ್ದಾನೆ ಎಂದು ನಟಿ ಆರೋಪಿಸಿದ್ದಳು.ಈ ಸಂಬಂಧ ಮಡೆನೂರು ಮನು ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸರು ದೂರು ದಾಖಲಿಸಿಕೊಂಡು ನಟನನ್ನು ಅರೆಸ್ಟ್ ಮಾಡಿದ್ದರು.

ನಿನ್ನೆ ಪೊಲೀಸರು ಮನುವನ್ನು ಕೋರ್ಟ್ ಗೆ ಹಾಜರುಪಡಿಸಿದ್ದರು. ಈ ವೇಳೆ ಕೋರ್ಟ್ ಎರಡು ದಿನಗಳಿಗೆ ಮನುವನ್ನು ಪೊಲೀಸರ ವಶಕ್ಕೆ ಒಪ್ಪಿಸಿದೆ. ಇಂದು ಮನುವನ್ನು ಕರೆದುಕೊಂಡು ಬಂದು ಸಂತ್ರಸ್ತೆ ಮನೆಗೆ ಬಂದ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.

ನಟಿಯ ಮನೆಯಲ್ಲಿ ಅತ್ಯಾಚಾರ, ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ. ಹೀಗಾಗಿ ಇಲ್ಲಿಗೆ ಬಂದು ಸ್ಥಳ ಮಹಜರು ನಡೆಸಲಾಗಿದೆ. ಇದೀಗ ಪೊಲೀಸರು ನಟನ ಮೊಬೈಲ್ ಫೋನ್ ವಶಕ್ಕೆ ಪಡೆದು ಎಫ್ಎಸ್ಎಲ್ ತನಿಖೆಗೆ ರವಾನಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ