ಮುಂಬೈನಲ್ಲಿ ಹೊಸ ಮನೆ ಖರೀದಿಸಿದ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ

ಗುರುವಾರ, 25 ಫೆಬ್ರವರಿ 2021 (09:47 IST)
ಮುಂಬೈ: ಸದ್ಯದಲ್ಲೇ ಬಾಲಿವುಡ್ ಗೆ ಪದಾರ್ಪಣೆ ಮಾಡಲಿರುವ  ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಮುಂಬೈನಲ್ಲಿ ಹೊಸ ಮನೆಯೊಂದನ್ನು ಖರೀದಿಸಿದ್ದಾರೆ ಎಂಬ ಸುದ್ದಿ ಬಂದಿದೆ.


ಹೀಗಾಗಿ ಬಾಲಿವುಡ್ ನಲ್ಲಿ ಆಕೆ ತಳವೂರುವುದು ಪಕ್ಕಾ ಎನ್ನಲಾಗಿದೆ. ತಮ್ಮ ಸಿನಿಮಾ ಕೆಲಸಗಳಿಗಾಗಿ ರಶ್ಮಿಕಾ ಹೈದರಾಬಾದ್, ಮುಂಬೈ ನಡುವೆ ಸಾಕಷ್ಟು ಓಡಾಡುತ್ತಾರೆ. ಆಗೆಲ್ಲಾ ಹೋಟೆಲ್ ರೂಂಗಳಲ್ಲಿ ಉಳಿದುಕೊಳ್ಳುತ್ತಾರೆ. ಆದರೆ ಈ ಪ್ರಯಾಸ ತಪ್ಪಿಸಲು ತಾವೇ ಮನೆಯೊಂದನ್ನು ಖರೀದಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ