ರಶ್ಮಿಕಾ ಮಂದಣ್ಣ ಕಡೆಯಿಂದ ಕೊನೆಗೂ ಒಂದು ಗುಡ್ ನ್ಯೂಸ್!

ಶುಕ್ರವಾರ, 26 ಏಪ್ರಿಲ್ 2019 (07:12 IST)
ಮುಂಬೈ: ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ನಟಿ ಎನಿಸಿಕೊಂಡಿರುವ ರಶ್ಮಿಕಾ ಮಂದಣ್ಣ ತಮಿಳಿನಲ್ಲೂ ಅವಕಾಶ ಪಡೆದಿದ್ದರು. ಇದೀಗ ಬಾಲಿವುಡ್ ಕಡೆಯಿಂದ ರಶ್ಮಿಕಾಗೆ ಕರೆ ಬಂದಿರುವ ಗುಡ್ ನ್ಯೂಸ್ ಬಂದಿದೆ.

 
ಸ್ಟಾರ್ ನಟರಿಗೆ ಲಕ್ಕಿ ಸ್ಟಾರ್ ಎಂದೇ ಕರೆಯಿಸಿಕೊಳ್ಳುವ ರಶ್ಮಿಕಾ ಇದಿಗ ಬಾಲಿವುಡ್ ನಿಂದ ಆಫರ್ ಪಡೆದಿದ್ದಾರೆ ಎಂಬ ಸುದ್ದಿ ಬಂದಿದೆ. ಅದೂ ಸಂಜಯ್ ಲೀಲಾ ಬನ್ಸಾಲಿಯಂತಹ ಶ್ರೇಷ್ಠ ನಿರ್ದೇಶಕನ ಚಿತ್ರದಲ್ಲಿ ಎಂಬ ರೂಮರ್ ಹರಡಿದೆ.

ಮೂಲಗಳ ಪ್ರಕಾರ ಸಂಜಯ್ ಲೀಲಾ ಬನ್ಸಾಲಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ಬಲ್ವಿಂದರ್ ಸಿಂಗ್ ಜಂಜ್ವಾ ಮೊದಲ ಬಾರಿಗೆ ನಿರ್ದೇಶನ ಮಾಡಲಿದ್ದಾರೆ. ಆದರೆ ಸ್ವತಃ ರಶ್ಮಿಕಾ ಅಥವಾ ಚಿತ್ರತಂಡ ಈ ಸುದ್ದಿ ಕನ್ ಫರ್ಮ್ ಮಾಡಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ