ರಶ್ಮಿಕಾ ಮಂದಣ್ಣ ಗರ್ಲ್ ಫ್ರೆಂಡ್ ಟೀಸರ್ ಔಟ್: ಬಾಯ್ ಫ್ರೆಂಡ್, ಕನ್ನಡಿಗ ದೀಕ್ಷಿತ್ ಶೆಟ್ಟಿ ಮುಖವೇ ಕಾಣ್ಸಲ್ಲ

Krishnaveni K

ಸೋಮವಾರ, 9 ಡಿಸೆಂಬರ್ 2024 (15:50 IST)
Photo Credit: X
ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿರುವ ಗರ್ಲ್ ಫ್ರೆಂಡ್ ಸಿನಿಮಾದ ಟೀಸರ್ ನ್ನು ಇಂದು ವಿಜಯ್ ದೇವರಕೊಂಡ ರಿಲೀಸ್ ಮಾಡಿದ್ದಾರೆ. ಆದರೆ ಟೀಸರ್ ನಲ್ಲಿ ನಾಯಕ ದೀಕ್ಷಿತ್ ಶೆಟ್ಟಿ ಮುಖವೇ ಸರಿಯಾಗಿ ಕಾಣಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ರಶ್ಮಿಕಾ ಮಂದಣ್ಣಗೆ ನಾಯಕನಾಗಿ ದೀಕ್ಷಿತ್ ಶೆಟ್ಟಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಟೀಸರ್ ನೋಡುತ್ತಿದ್ದರೆ ಈ ಸಿನಿಮಾ ಪಕ್ಕಾ ನಾಯಕಿ ಪ್ರಧಾನ ಸಿನಿಮಾ ಎನ್ನುವುದು ಪಕ್ಕಾ. ಆದರೆ ಟೀಸರ್ ನಲ್ಲಿ ದೀಕ್ಷಿತ್ ಶೆಟ್ಟಿಯೂ ಇದ್ದಾರೆ, ಆದರೆ ಮುಖ ಮಾತ್ರ ಎಲ್ಲೂ ಸರಿಯಾಗಿ ಕಾಣಿಸಲ್ಲ.

ಕೇವಲ ರಶ್ಮಿಕಾರ ಕ್ಲೋಸ್ ಅಪ್ ಶಾಟ್ ಗಳನ್ನು ಮಾತ್ರ ಇಟ್ಟುಕೊಂಡು ಟೀಸರ್ ಹೊರಬಿಡಲಾಗಿದೆ. ಕನ್ನಡಿಗ, ದೀಕ್ಷಿತ್ ಶೆಟ್ಟಿ ನಾಯಕರಾಗಿದ್ದರೂ ಅವರನ್ನು ಟೀಸರ್ ನಲ್ಲಿ ಹೆಚ್ಚು ಹೈಲೈಟ್ ಮಾಡಲಾಗಿಲ್ಲ. ಹೀಗಾಗಿ ಈ ಸಿನಿಮಾದಲ್ಲಿ ರಶ್ಮಿಕಾನೇ ಪ್ರಮುಖ ಪಾತ್ರ ಎನ್ನುವುದು ಪಕ್ಕಾ ಆಗಿದೆ.

ಟೀಸರ್ ನೋಡಿ ದೀಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ಕೊಂಚ ನಿರಾಸೆಯಾಗಿರಬಹುದು. ಆದರೆ ಸಿನಿಮಾದಲ್ಲಿ ದೀಕ್ಷಿತ್ ಗೆ ಹೆಚ್ಚು ಪ್ರಾಮುಖ್ಯತೆ ಇರಬಹುದು ಎಂದು ನಿರೀಕ್ಷಿಸಲಾಗಿದೆ. ಇನ್ನು, ಟೀಸರ್ ಗೆ ವಿಜಯ್ ದೇವರಕೊಂಡ ಧ್ವನಿ ನೀಡಿದ್ದು ಇದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

#TheGirlfriend teaser released by @TheDeverakonda with his voice over. Teaser is impressive????????pic.twitter.com/0zSHN6nwcG

— Movies4u (@Movies4uOfficl) December 9, 2024

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ