ಬೆಂಗಳೂರು: ಬಿಗ್‌ಬಾಸ್ ಸೀಸನ್ 11 ಇಂಟ್ರೆಸ್ಟಿಂಗ್ ಎಪಿಸೋಡ್‌ನೊಂದಿಗೆ ಇದೀಗ ಪ್ರೇಕ್ಷಕರನ್ನು ಮತ್ತಷ್ಟು ಸೆಳೆಯುತ್ತಿದೆ. ಇದೀಗ ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಬಿಗ್‌ಬಾಸ್ ಸೀಸನ್ 10ರ ಒಂದಷ್ಟು ಸ್ಪರ್ಧಿಗಳು ಮನೆಯೊಳಗೆ ಎಂಟ್ರಿಕೊಟ್ಟಿದ್ದಾರೆ. ಕಳೆದ ಸೀಸನ್‌ನ ಡ್ರೋನ್ ಪ್ರತಾಪ್, ತನಿಷಾ ಕುಪ್ಪಂಡ, ತುಕಾಲಿ ಸಂತೋಷ್, ವರ್ತೂರು ಸಂತೋಷ್ ಆಗಮಿಸಿ, ಹೊಸ ಸ್ಪರ್ಧಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ.
ಮನೆಗೆ ಬಂದ ಅತಿಥಿಗಳನ್ನು ನೋಡಿ, ಬಿಗ್‌ಬಾಸ್ ಸ್ಪರ್ಧಿಗಳು ಫುಲ್ ಖುಷ್ ಆಗಿದ್ದಾರೆ. ಇಂದಿನ ಎಪಿಸೋಡ್ ತುಂಬಾನೇ ಇಂಟ್ರೆಸ್ಟಿಂಗ್ ಆಗಿ ಹೊರಬರಲಿದೆ.
ಭಾನುವಾರ ಐಶ್ವರ್ಯ ಹಾಗೂ ಚೈತ್ರಾ ಕುಂದಾಪುರ ಅವರಿಗೆ ಎಲಿಮಿನೇಷನ್ ವಿಚಾರದಲ್ಲಿ ಶಾಕ್ ನೀಡಿದ್ದರು. ಸುದೀಪ್ ಅವರು ಇಬ್ಬರನ್ನು ಪ್ರತ್ಯೇಕ ರೂಂಗೆ ಕರೆಸಿ, ಐಶ್ವರ್ಯಾ ಅವರು ಸೇಪ್ ಎಂದು ಹೇಳಿ, ಮನೆಯೊಳಗೆ ಹೋಗಿ ಎಂದು ಹೇಳಿದರು.
ಇನ್ನೂ ಚೈತ್ರಾ ಅವರನ್ನು ಕನ್ಫೆಷನ್ ರೂಂನಲ್ಲೇ ಕೂರಿಸಿ, ಮನೆಯವರ ಚಲನವಲನವನ್ನು ನೋಡಲು ಬಿಟ್ಟಿದ್ದಾರೆ. ಅದಲ್ಲದೆ ಬಿಗ್‌ಬಾಸ್ ಹೇಳುವಾಗ ಮನೆಯಿಂದ ಹೊರಬನ್ನಿ ಎಂದು ಹೇಳಿದ್ದಾರೆ. ಆದರೆ ಈ ವಾರ ನೋ ಎಲಿಮಿನೇಷನ್ ರೌಂಡ್ ಎಂದು ಸುದೀಪ್ ಹೇಳಿದ್ದಾರೆ.