ನಾನಿನ್ನೂ ಯಂಗ್, ಈಗ್ಲೇ ಮದ್ವೆಯಾಗಲ್ಲ ಎಂದ ರಶ್ಮಿಕಾ ಮಂದಣ್ಣ
ರಕ್ಷಿತ್ ಶೆಟ್ಟಿ ಜೊತೆ ಎಂಗೇಜ್ ಮೆಂಟ್ ಮುರಿದುಬಿದ್ದ ಬಳಿಕ ರಶ್ಮಿಕಾ ಹೆಸರು ವಿಜಯ್ ದೇವರಕೊಂಡ ಜೊತೆ ಥಳುಕು ಹಾಕಿಕೊಂಡಿತ್ತು. ಈಗಲೂ ಇಬ್ಬರ ನಡುವೆ ಸ್ನೇಹಕ್ಕೂ ಮೀರಿದ ಗೆಳೆತನವಿದೆ ಎಂಬ ಗಾಸಿಪ್ ಗಳಿವೆ.
ಈ ನಡುವೆ ಸಂದರ್ಶನವೊಂದರಲ್ಲಿ ರಶ್ಮಿಕಾಗೆ ನಿಮ್ಮ ಹುಡುಗ ಹೇಗಿರಬೇಕು ಎಂದು ಪ್ರಶ್ನಿಸಲಾಯ್ತು. ಇದಕ್ಕೆ ಉತ್ತರಿಸಿರುವ ರಶ್ಮಿಕಾ ನಾನಿನ್ನೂ ಯಂಗ್. ಈಗ್ಲೇ ಮದುವೆಯಾಗಲ್ಲ. ಆದ್ರೂ ನಾನು ಮದುವೆಯಾಗುವ ಹುಡುಗ ನನಗಾಗಿ ಸಮಯ, ಗೌರವ ಕೊಡಬೇಕು, ನನಗೆ ಸುರಕ್ಷಿತ ಭಾವ ಕೊಡಬೇಕು. ಎರಡೂ ಕಡೆ ಗೌರವ, ಪ್ರೀತಿ ಭಾವನೆ ಇದ್ದಾಗ ಮಾತ್ರ ಲವ್ ಸಕ್ಸಸ್ ಆಗುತ್ತದೆ. ನಾನು ಮದುವೆ ಅಂತ ಆದರೆ ಆ ಹುಡುಗ ನನಗೆ ರಕ್ಷಣೆ ಮತ್ತು ಕಂಫರ್ಟೇಬಲ್ ಭಾವನೆ ಕೊಡುವ ವ್ಯಕ್ತಿಯಾಗಿರಬೇಕು ಎಂದಿದ್ದಾರೆ.