10 ವರ್ಷದಲ್ಲಿ ದೇಶದಲ್ಲಿ ಅಚ್ಚರಿ ಬೆಳವಣಿಗೆಯಾಗಿದೆ ಎಂದ ರಶ್ಮಿಕಾ ಮಂದಣ್ಣ

Sampriya

ಬುಧವಾರ, 15 ಮೇ 2024 (16:16 IST)
Photo Courtesy X
ಮುಂಬೈ:  ಪ್ರಧಾನಿ ನರೇಂದ್ರ ಮೋದಿ ಅವರು ಜನವರಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಸೇವಾರಿ-ನವ ಶೇವಾ ಅಟಲ್ ಸೇತು ಉದ್ಘಾಟಿಸಿದರು. ಇದು ಮುಂಬೈನ ಸಾರಿಗೆಯಲ್ಲಿ ಮಹತ್ವದ ಬದಲಾವಣೆ ತಂದಿದೆ ಎಂದು 'ಪುಷ್ಪ 2' ನಟಿ ರಶ್ಮಿಕಾ ಮಂದಣ್ಣ ಹೇಳಿದರು.

ಎಎನ್‌ಐ ಜತೆ ಅಟಲ್ ಸೇತು ಬಗ್ಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ಎರಡು ಗಂಟೆಗಳ ಪ್ರಯಾಣವನ್ನು 20 ನಿಮಿಷದಲ್ಲಿ ಮಾಡಬಹುದು. ತುಂಬಾ ಸುಲಭವಾಗಿ ಮತ್ತು ಎಲ್ಲ ಮೂಲಸೌಕರ್ಯಗಳೊಂದಿಗೆ ಮಾಡಿದ್ದರೆ ಅದು ನನಗೆ ಹೆಮ್ಮೆ ತರುತ್ತದೆ ಎಂದರು.

"ಅಬ್ ತೋ ಇಂಡಿಯಾ ನೆ ನಾ ಸುನ್ನಾ ಬಂದ್ ಕರ್ ದಿಯಾ ಹೈ. ಅವರು ಇನ್ನು ಮುಂದೆ ಅದಕ್ಕೆ ಸಿದ್ಧರಿಲ್ಲ. ಹಾಗಾಗಿ, ಈಗ ನಾನು ಭಾವಿಸುತ್ತೇನೆ, ಕನಿಷ್ಠ, ಭಾರತ ಎಲ್ಲೂ ನಿಲ್ಲುತ್ತಿಲ್ಲ. ಈಗ ದೇಶದ ಬೆಳವಣಿಗೆಯನ್ನು ನೋಡಿ. ಇದು ಅದ್ಭುತವಾಗಿದೆ. ಕಳೆದ 10 ವರ್ಷಗಳಲ್ಲಿ ದೇಶವು ಹೇಗೆ ಬೆಳೆದಿದೆ, ನಮ್ಮ ದೇಶದಲ್ಲಿನ ಯೋಜನೆ, ರಸ್ತೆ ಯೋಜನೆ, ಎಲ್ಲವೂ ಅದ್ಭುತವಾಗಿದೆ ಎಂದು ಹೇಳಿದರು.

"ಯುವ ಪೀಳಿಗೆ, ಯುವ ಭಾರತ, ಅಂತಹ ವೇಗದಲ್ಲಿ ಬೆಳೆಯುತ್ತಿದೆ. ಭಾರತವು ಅತ್ಯಂತ ಬುದ್ಧಿವಂತ ದೇಶ ಎಂದು ಹೇಳಲು ಇಚ್ಛಿಸುತ್ತೇನೆ ಎಂದರು.
.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ