ನನಗೆ ಗೊತ್ತಿರುವವರನ್ನೇ ಮದುವೆಯಾಗ್ತೀನಿ: ರಶ್ಮಿಕಾ ಮಂದಣ್ಣ
ಅಭಿಮಾನಿಯೊಬ್ಬರು ರಶ್ಮಿಕಾಗೆ ಟ್ವೀಟ್ ಮಾಡಿ ನೇರವಾಗಿಯೇ ನನ್ನ ಮದುವೆಯಾಗ್ತೀರಾ ಎಂದು ಪ್ರಪೋಸ್ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ರಶ್ಮಿಕಾ ‘ಆದರೆ ನಾನು ನನಗೆ ಗೊತ್ತಿರುವ ಒಬ್ಬರನ್ನೇ ಮದುವೆಯಾಗ್ತೀನಿ. ಏನು ಮಾಡಲಿ?’ ಎಂದಿದ್ದಾರೆ.
ಇನ್ನು ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಹೇಳಿ ಎಂದಿದ್ದಕ್ಕೆ ‘ಸೂಪರ್ ಸ್ಟಾರ್’ ಎಂದು ಒಂದೇ ಶಬ್ಧದಲ್ಲಿ ಉತ್ತರಿಸಿ ಹೃದಯದ ಚಿಹ್ನೆಯನ್ನೂ ಬರೆದಿದ್ದಾರೆ. ಈ ಹಿಂದೆ ಯಶ್ ಶೋ ಮ್ಯಾನ್ ಎಂದು ರಶ್ಮಿಕಾ ವಿವಾದಕ್ಕೆ ಗುರಿಯಾಗಿದ್ದರು.