ಸಿನಿಮಾ ಪ್ರೊಡ್ಯೂಸ್ ಮಾಡ್ತಾರಂತೆ ರಶ್ಮಿಕಾ ಮಂದಣ್ಣ

ಗುರುವಾರ, 19 ಮಾರ್ಚ್ 2020 (09:44 IST)
ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ತೆಲುಗು, ತಮಿಳು ಮತ್ತು ಕನ್ನಡದಲ್ಲಿ ಅಭಿನಯಿಸಿ ಬೇಡಿಕೆಯ ನಟಿ ಎನಿಸಿಕೊಂಡವರು. ಚಿತ್ರರಂಗಕ್ಕೆ ಕಾಲಿಟ್ಟ ಎರಡನೇ ವರ್ಷದಲ್ಲಿ ಭರ್ಜರಿ ಸಂಭಾವನೆ ನಟಿಯಾಗಿದ್ದಾರೆ.


ಇಂತಿಪ್ಪ ರಶ್ಮಿಕಾ ಈಗ ತಾವೇ ಸಿನಿಮಾ ಪ್ರೊಡ್ಯೂಸ್ ಮಾಡುವ ಯೋಚನೆ ಮಾಡುತ್ತಿರುವ ಸುಳಿವು ನೀಡಿದ್ದಾರೆ. ಹೊಸ ನಿರ್ದೇಶಕ, ನಿರ್ಮಾಪಕ, ಕತೆಗಾರರಿಗೆ ರಶ್ಮಿಕಾ ಆಫರ್ ಕೊಡಲಿದ್ದಾರಂತೆ.

ನಿರ್ದೇಶಕರಾಗಬೇಕು ಎಂದುಕೊಂಡವರು, ಒಳ್ಳೊಳ್ಳೆ ಐಡಿಯಾ, ಕತೆ ನಿಮ್ಮ ಬಳಿಯಿದ್ದರೆ ನನ್ನ ಇನ್ ಸ್ಟಾಗ್ರಾಂನಲ್ಲಿರುವ ಈಮೇಲ್ ಐಡಿಗೆ ಕಳುಹಿಸಿ. ನಮ್ಮದೇ ಒಂದು ಸಣ್ಣ ತಂಡವಿದೆ. ನಿಮ್ಮ ಕತೆ, ಐಡಿಯಾವನ್ನು ವಿಮರ್ಶಿಸಿ ಸಿನಿಮಾ ಮಾಡುವ ಬಗ್ಗೆ ಯೋಚನೆ ಮಾಡ್ತೀವಿ ಎಂದು ರಶ್ಮಿಕಾ ಹೇಳಿದ್ದಾರೆ. ಈ ಮೂಲಕ ಹೊಸಬರ ಐಡಿಯಾಗಳಿಗೆ ವೇದಿಕೆ ನಿರ್ಮಿಸಿಕೊಡುವುದಾಗಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ