ಮತ್ತೆ ಸಿಹಿ ಸುದ್ದಿ ಕೊಟ್ಟ ರಾಧಿಕಾ ಪಂಡಿತ್!
ಇದುವರೆಗೆ ಯಶ್ ದಂಪತಿ ತಮ್ಮ ಪುತ್ರನ ಫೋಟೋವನ್ನು ಹೊರಗೆ ಎಲ್ಲೂ ಪ್ರಕಟಿಸಿಲ್ಲ. ಹೀಗಾಗಿ ಅಭಿಮಾನಿಗಳಿಗೂ ಜ್ಯೂನಿಯರ್ ಯಶ್ ಹೇಗಿರಬಹುದು ಎಂಬ ಕುತೂಹಲವಿದೆ. ಹೀಗಾಗಿ ರಾಧಿಕಾ, ಯಶ್ ಬಳಿ ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಪುತ್ರನ ಫೋಟೋ ಯಾವಾಗ ತೋರಿಸುತ್ತೀರಿ ಎಂದು ಕೇಳುತ್ತಲೇ ಇರುತ್ತಾರೆ. ಇದಕ್ಕೀಗ ರಾಧಿಕಾ ಉತ್ತರಿಸಿದ್ದು, ಸದ್ಯದಲ್ಲೇ ನಮ್ಮ ಜ್ಯೂನಿಯರ್ ಫೋಟೋ ನಿಮ್ಮ ಮುಂದೆ ಪ್ರಕಟಿಸುತ್ತೇವೆ ಎಂದಿದ್ದಾರೆ. ರಾಧಿಕಾ ಮಾತಿನಿಂದ ಅಭಿಮಾನಿಗಳೂ ಖುಷಿಯಾಗಿದ್ದಾರೆ.