ಕನ್ನಡದಲ್ಲೇ ರಾಜ್ಯೋತ್ಸವಕ್ಕೆ ವಿಶ್ ಮಾಡಿದರೂ ರಶ್ಮಿಕಾ ಮಂದಣ್ಣರನ್ನು ಸುಮ್ನೇ ಬಿಡಲಿಲ್ಲ ಟ್ರೋಲಿಗರು!

ಶನಿವಾರ, 2 ನವೆಂಬರ್ 2019 (08:05 IST)
ಬೆಂಗಳೂರು: ಯಾಕೋ ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಕನ್ನಡ ವಿಚಾರಕ್ಕೆ ಆಗಾಗ ಟ್ರೋಲ್ ಗೊಳಗಾಗುತ್ತಲೇ ಇರುತ್ತಾರೆ. ಅದೇ ಕಾರಣಕ್ಕೆ ಕನ್ನಡ ರಾಜ್ಯೋತ್ಸವಕ್ಕೆ ರಗಳೆಯೇ ಬೇಡವೆಂದು ರಶ್ಮಿಕಾ ಕನ್ನಡದಲ್ಲೇ ಶುಭಾಷಯ ಕೋರಿದ್ದರು.


ಹಾಗಿದ್ದರೂ ಟ್ರೋಲಿಗರು ಮಾತ್ರ ರಶ್ಮಿಕಾ ಕಾಲೆಳೆಯುವುದನ್ನು ಬಿಟ್ಟಿಲ್ಲ. ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಕನ್ನಡದಲ್ಲೇ ಕನ್ನಡ ರಾಜ್ಯೋತ್ಸವಕ್ಕೆ ಶುಭಾಷಯ ಸಂದೇಶ ಬರೆದಿದ್ದರು ರಶ್ಮಿಕಾ.

ಆದರೆ ಇಷ್ಟಕ್ಕೂ ಸುಮ್ಮನೇ ಬಿಡದ ಟ್ರೋಲಿಗರು, ಸದ್ಯ, ನೀವು ಕನ್ನಡ ಮರೆತಿಲ್ವಲ್ಲಾ ಎಂದಿದ್ದಾರೆ. ಮತ್ತೆ ಕೆಲವರು ಮನಃಪೂರ್ವಕವಾಗಿ ಈ ಸಂದೇಶ ಬರೆದಿದ್ದರೆ ನಿಮಗೂ ಶುಭಾಷಯಗಳು ಎಂದಿದ್ದಾರೆ. ಅಂತೂ ರಶ್ಮಿಕಾ ಟ್ರೋಲ್ ಆಗುವುದು ಮಾತ್ರ ತಪ್ಪಲಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ