ರಕ್ಷಿತ್ ಶೆಟ್ಟಿದು ನಿಜವಾದ ಲವ್ ಆಗಿರ್ಲಿಲ್ವಾ ಹಂಗಿದ್ರೆ? ತಿರುಗಿಬಿದ್ದ ರಶ್ಮಿಕಾ ಮಂದಣ್ಣಗೆ ಅಭಿಮಾನಿಗಳ ಪ್ರಶ್ನೆ
ಗುರುವಾರ, 21 ಮಾರ್ಚ್ 2019 (09:11 IST)
ಬೆಂಗಳೂರು: ಮೊನ್ನೆಯಷ್ಟೇ ಡಿಯರ್ ಕಾಮ್ರೇಡ್ ಸಿನಿಮಾದ ಟೀಸರ್ ನಲ್ಲಿ ನಾಯಕ ವಿಜಯ್ ದೇವರಕೊಂಡಗೆ ಲಿಪ್ ಲಾಕ್ ಮಾಡಿ ಸಾಕಷ್ಟು ಟ್ರೋಲ್ ಗೊಳಗಾಗಿದ್ದ ನಟಿ ರಶ್ಮಿಕಾ ಮಂದಣ್ಣ ಟ್ರೋಲ್ ಗೊಳಗಾಗಿದ್ದರು.
ಗೀತಾ ಗೋವಿಂದಂ ಸಿನಿಮಾ ಬಳಿಕ ಎರಡನೇ ಬಾರಿಗೆ ವಿಜಯ್ ಗೆ ಲಿಪ್ ಲಾಕ್ ಮಾಡಿದ ರಶ್ಮಿಕಾಗೆ ಯಾರ ಹೊಟ್ಟೆ ಉರಿಸಲು ಈ ರೀತಿ ಪದೇ ಪದೇ ಇಂತಹ ದೃಶ್ಯದಲ್ಲಿ ಅಭಿನಯಿಸುತ್ತಿದ್ದೀರಿ ಎಂದು ಬಾಯಿಗೆ ಬಂದಂತೆ ಟ್ರೋಲ್ ಮಾಡಿದ್ದರು.
ಇದೀಗ ಟ್ರೋಲಿಗರಿಗೆ ಪ್ರತಿಕ್ರಿಯಿಸಿದ ರಶ್ಮಿಕಾ ‘ಇಂತಹ ಸಂದರ್ಭದಲ್ಲೇ ನಿಜವಾಗಿ ನನ್ನನ್ನು ಲವ್ ಮಾಡುವವರು ಯಾರು ಎಂದು ಗೊತ್ತಾಗೋದು. ಇದು ನನ್ನನ್ನು ನಿಜವಾಗಿ ಪ್ರೀತಿಸುವವರು ಯಾರು ಎಂದು ಸತ್ವ ಪರೀಕ್ಷೆ ಮಾಡುವ ಕಾಲ. ನನ್ನನ್ನು ಇಷ್ಟಪಡದೇ ಇರುವವರಿಗೆ ನನ್ನ ಶುಭ ಹಾರೈಕೆಯಿರುತ್ತದೆ’ ಎಂದು ಬರೆದುಕೊಂಡಿದ್ದಾರೆ.
ರಶ್ಮಿಕಾ ಪ್ರತಿಕ್ರಿಯೆ ನೋಡಿ ಮತ್ತೆ ಟ್ವಿಟರಿಗರು ಟ್ರೋಲ್ ಮಾಡಿದ್ದು, ಹಾಗಿದ್ದರೆ ಆವತ್ತು ರಕ್ಷಿತ್ ಶೆಟ್ಟಿಯದ್ದು ನಿಜವಾದ ಲವ್ ಆಗಿರಲಿಲ್ಲವೇ ಎಂದು ಕಾಲೆಳೆದಿದ್ದಾರೆ. ಇನ್ನು ಕೆಲವರು, ವಿಜಯ್ ಜತೆಗೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದರೆ ಅದನ್ನು ಅನೌನ್ಸ್ ಮಾಡಮ್ಮಾ ಎಂದು ಟಾಂಗ್ ಕೊಟ್ಟಿದ್ದಾರೆ. ಅಂತೂ ಮತ್ತೊಮ್ಮೆ ರಶ್ಮಿಕಾ ಟ್ರೋಲ್ ಗೊಳಗಾಗುವುದು ತಪ್ಪಿಲ್ಲ
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ