ಯಾರು ಏನೇ ಹೇಳಿದ್ರೂ ಏನೂ ಹೇಳಲ್ಲ, ಕೋಪ ಮಾಡ್ಕೊಳ್ಳಲ್ಲ: ಟಾಂಗ್ ಕೊಟ್ಟವರಿಗೆ ದರ್ಶನ್ ಕಿಕ್

ಬುಧವಾರ, 20 ಮಾರ್ಚ್ 2019 (15:37 IST)
ಮಂಡ್ಯ: ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಶ್ ಪರವಾಗಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ದರ್ಶನ್ ಟಾಂಗ್ ಕೊಟ್ಟವರಿಗೆ ತಿರುಗೇಟು ನೀಡಿದ್ದಾರೆ.


ಎರಡು ದಿನದಿಂದ ನಮ್ಮ ಬಗ್ಗೆ ಯಾರು ಯಾರು ಏನೆಲ್ಲಾ ಹೇಳ್ತಿದ್ದಾರೆ ಎಂದು ನಾವು ನೋಡ್ತಿದ್ದೀವಿ. ಯಾರು ಏನೇ ಹೇಳಿದ್ರೂ, ನಾವು ಏನೂ ಹೇಳಲ್ಲ, ಕೋಪ ಮಾಡ್ಕೊಳ್ಳಲ್ಲ ಎಂದು ದರ್ಶನ್ ನಗುತ್ತಲೇ ಟಾಂಗ್ ಕೊಟ್ಟಿದ್ದಾರೆ.

ಅಪ್ಪಾಜಿ ಮೇಲಿನ ಪ್ರೀತಿಗೆ ಇಲ್ಲಿಗೆ ಬಂದಿದ್ದೇವೆ. ಸುಮಲತಾ ಅಮ್ಮನಿಗೆ ನಿಮ್ಮ ಆಶೀರ್ವಾದ ಇರುತ್ತದೆ ಎಂದು ನನಗೆ ಗೊತ್ತು. ನಿಮ್ಮ ಈ ಜೋಶ್, ಧ್ವನಿ ಮೇ 23 ರವರೆಗೂ ಹೀಗೇ ಇರಲಿ ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ