ತಡರಾತ್ರಿ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ರಶ್ಮಿಕಾ, ವಿಜಯ್ ದೇವರಕೊಂಡ ಒಂದೇ ವಿಮಾನ ಪ್ರಯಾಣ ಬೆಳೆಸಿದ್ದೆಲ್ಲಿಗೆ

Sampriya

ಮಂಗಳವಾರ, 24 ಡಿಸೆಂಬರ್ 2024 (17:19 IST)
Photo Courtesy X
ಸಾಮಾಜಿಕ ಜಾಲತಾಣದಲ್ಲಿ ಡೇಟಿಂಗ್ ವದಂತಿಗಳ ನಡುವೆಯೂ ಪುಪ್ಪ 2 ಖ್ಯಾತಿಯ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಅವರು ಏರ್‌ಪೋರ್ಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಇಬ್ಬರು ಪ್ರತ್ಯೇಕವಾಗಿ ಬಂದರೂ, ಒಂದೇ ವಿಮಾನವನ್ನು ಏರುವ ಮೂಲಕ ಮತ್ತೇ ಸುದ್ದಿಯಾಗಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಅವರು ತೆಲುಗಿನಲ್ಲಿ ವಿಜಯ್ ದೇವರಕೊಂಡ ಜತೆ ಗೀತಾ ಗೋವಿದಂ ಸಿನಿಮಾದಲ್ಲಿ ಅಭಿನಯಿಸಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಯಿತು. ಈ ಸಿನಿಮಾದ ಬಳಿಕ ಆಗಾಗ ವಿಜಯ್ ದೇವರಕೊಂಡ ಜತೆಗೆ ರಶ್ಮಿಕಾ ಹೆಸರು ತಳುಕು ಹಾಕಿಕೊಂಡಿದೆ.

ಈಚೆಗೆ ಪುಪ್ಪ 2 ಸಿನಿಮಾ ಇವೆಂಟ್‌ನಲ್ಲಿ ರಶ್ಮಿಕಾ ಮಂದಣ್ಣ ಅವರು ತಮ್ಮ ಮದುವೆ ಬಗ್ಗೆ ಹೇಳಿಕೊಳ್ಳುವ ಮೂಲಕ ವಿಜಯ್ ದೇವರಕೊಂಡ ಜತೆಗಿನ ಲವ್ ಬಗ್ಗೆ ಇನ್‌ ಡೈರೆಕ್ಟ್ ಆಗಿ ಹೇಳಿದ್ದಾರೆ. ಇನ್ನೂ ಪುಪ್ಪ 2 ವೀಕ್ಷಿಸಲು ವಿಜಯ್ ದೇವರಕೊಂಡ ಫ್ಯಾಮಿಲಿ ಜತೆ ರಶ್ಮಿಕಾ ಬರುವ ಮೂಲಕ ಮತ್ತಷ್ಟು ಡೇಟಿಂಗ್ ವಿಚಾರಕ್ಕೆ ಪುಷ್ಟಿ ನೀಡಿತು.

ಇದೀಗ ಈ ಜೋಡಿ ಏರ್‌ಪೋರ್ಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡು ಪ್ರಯಾಣಿಸುವ ಮೂಲಕ ಟಾಲಿವುಡ್, ಬಾಲಿವುಡ್ ಅಂಗಳದಲ್ಲಿ ಸುದ್ದಿಗೆ ಕಾರಣರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ