ಕಾಮಾಕ್ಷಿ ಆಸ್ಪತ್ರೆಗೆ ಆರೋಗ್ಯ ತಪಾಸಣೆಗೆ ಬಂದ ದರ್ಶನ್: ಜಮಾಯಿಸಿದ ಅಭಿಮಾನಿಗಳು

Sampriya

ಮಂಗಳವಾರ, 24 ಡಿಸೆಂಬರ್ 2024 (14:37 IST)
Photo Courtesy X
ಮೈಸೂರು: ನಟ ದರ್ಶನ್ ಅವರು ಮೈಸೂರಿನ ಕಾಮಾಕ್ಷಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಬಂದಿದ್ದಾರೆ. ಬೆನ್ನುನೋವಿನ ಸಂಬಂಧ ವೈದ್ಯರನ್ನು ನಟ ಭೇಟಿಯಾಗಿದ್ದಾರೆ.  

ಮೈಸೂರಿನಲ್ಲಿ ಫಾರ್ಮ್‌ಹೌಸ್‌ನಲ್ಲಿರುವ ದರ್ಶನ್‌ ಇಂದು ಕಾಮಾಕ್ಷಿ ಆಸ್ಪತ್ರೆಗೆ ದರ್ಶನ್ ಆರೋಗ್ಯ ತಪಾಸಣೆಗೆ ಅವರು ಆಗಮಿಸಿದ್ದಾರೆ. ಬೆನ್ನು ನೋವಿನ ಹಿನ್ನೆಲೆ ಆರೋಗ್ಯ ತಪಾಸಣೆ ಮಾಡಿಸಿದ್ದಾರೆ. ಈ ವೇಳೆ, ದರ್ಶನ್‌ಗೆ ಧನ್ವೀರ್ ಸಾಥ್ ನೀಡಿದ್ದಾರೆ.

ಈ ವೇಳೆ, ದರ್ಶನ್‌ ನೋಡಲು ಅಪಾರ ಸಂಖ್ಯೆಯಲ್ಲಿ ಫ್ಯಾನ್ಸ್‌ ಜಮಾಯಿಸಿದ್ದಾರೆ. ಆಸ್ಪತ್ರೆಯ ಮುಂದೆ ನೂರಾರು ಮಂದಿ ಸೇರಿ ದರ್ಶನ್‌ಗೆ ಜೈಕಾರ ಕೂಗಿದರು. ಕಾರಿನಲ್ಲಿದ್ದ ದರ್ಶನ್‌ ಅಭಿಮಾನಿಗಳನ್ನು ನೋಡಿ ಕೈಮುಗಿದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌, ಅವರ ಆಪ್ತೆ ಪವಿತ್ರಾ ಗೌಡ ಸೇರಿದಂತೆ ಆರು ಆರೋಪಿಗಳಿಗೆ ಕಳೆದ ವಾರ ಹೈಕೋರ್ಟ್‌ ಜಾಮೀನು ನೋಡಿದೆ. ದರ್ಶನ್‌ಗೆ ಬೇಲ್ ಸಿಕ್ಕ ಹಿನ್ನೆಲೆಯಲ್ಲಿ ಸೋಮವಾರ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ