ಶಿವಣ್ಣಗೆ ಇಂದು ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆ: ಹಲವೆಡೆ ಅಭಿಮಾನಿಗಳಿಂದ ಪೂಜೆ ಸಲ್ಲಿಕೆ

Sampriya

ಮಂಗಳವಾರ, 24 ಡಿಸೆಂಬರ್ 2024 (14:57 IST)
ರಾಮನಗರ: ಇಂದು ಅಮೆರಿಕದಲ್ಲಿ ನಟ ಶಿವರಾಜ್‌ಕುಮಾರ್‌ಗೆ ನಡೆಯುವ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲೆಂದು ಶಿವಣ್ಣ ಅಭಿಮಾನಿಗಳು ಪೂಜೆ ನೆರವೇರಿಸಿದ್ದಾರೆ.

ರಾಜ್ಯದ ಹಲವೆಡೆ ಶಿವಣ್ಣನ ಆರೋಗ್ಯಕ್ಕೆ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದು, ಚನ್ನಪಟ್ಟಣದ ಪ್ರಸಿದ್ಧ ಕೆಂಗಲ್ ಆಂಜನೇಯಸ್ವಾಮಿ ದೇವಾಲಯದಲ್ಲೂ ಅಭಿಮಾನಿಗಳು ಶಿವಣ್ಣನ ಹೆಸರಿನಲ್ಲಿ ಅರ್ಚನೆ ಮಾಡಿಸಿ ಪ್ರಸಾದ ಹಂಚಿಕೆ ಮಾಡಿದ್ದಾರೆ.

ಅದಲ್ಲದೆ 101 ಈಡುಗಾಯಿ ಹೊಡೆದು ಶಿವರಾಜ್‌ಕುಮಾರ್ ಪೋಟೋ ಹಿಡಿದು ಶುಭಹಾರೈಸಿದ್ದಾರೆ. ಮೂತ್ರನಾಳ ಸಮಸ್ಯೆಯಿಂದ ಬಳಲುತ್ತಿರುವ ಶಿವರಾಜ್‌ಕುಮಾರ್‌ಗೆ ಇಂದು ಅಮೆರಿಕಾದಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದೆ.

ಆದಷ್ಟು ಬೇಗ ಗುಣಮುಖರಾಗಿ ದೇಶಕ್ಕೆ ವಾಪಾಸ್ಸಾಗಲಿ ಎಂದು ಅವರ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದ್ದಾರೆ.

ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲೂ ಶಿವಣ್ಣ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು.

ಶಿವರಾಜ್ ಕುಮಾರ್ ಅಭಿಮಾನಿಗಳು ಹಾಗೂ ನವಕರ್ನಾಟಕ ಯುವಶಕ್ತಿ ಸಂಘಟನೆ ವತಿಯಿಂದ ಶಿವರಾಜ್ ಕುಮಾರ್ ಪೋಟೋ ಇಟ್ಟು ಸಂಕಲ್ಪ ಮಾಡಿಸುವ ಮೂಲಕ ದೇವರಲ್ಲಿ ಶಿವರಾಜ್ ಕುಮಾರ್‌ ಅವರಿಗೆ ಆರೋಗ್ಯ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸಿಕೊಂಡರು. ಬೇಗ ಗುಣಮುಖರಾಗಿ ತವರಿಗೆ ವಾಪಾಸ್ಸಾಗಲಿ ಎಂದು ಅಭಿಮಾನಿಗಳು ಆಶಯ ವ್ಯಕ್ತಪಡಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ