ದೇವರಕೊಂಡ ಫ್ಯಾಮಿಲಿನೊಂದಿಗೆ ಪುಷ್ಪ 2 ವೀಕ್ಷಿಸಿದ ರಶ್ಮಿಕಾ: ಏನಿದರ ಗುಟ್ಟು ಎಂದ ಅಭಿಮಾನಿಗಳು
ಇತ್ತೀಚೆಗೆ ನಟಿ ಪುಷ್ಪ 2 ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ರಶ್ಮಿಕಾ ಮದುವೆ ಬಗ್ಗೆ ಸುಳಿವು ನೀಡಿದ್ದರು. ಅದಷ್ಟೇ ಅಲ್ಲ, ಇತ್ತ ವಿಜಯ್ ಕೂಡ ಸಂದರ್ಶನವೊಂದರಲ್ಲಿ ನನಗೆ 35 ವರ್ಷವಾಗಿದೆ. ನಾನು ಸಿಂಗಲ್ ಆಗಿದ್ದೇನೆ ಎಂದು ಭಾವಿಸುತ್ತೀರಾ? ಎಂದು ನಿರೂಪಕಿಯನ್ನು ಪ್ರಶ್ನಿಸಿದರು. ಈ ಮೂಲಕ ತಾವು ರಿಲೇಷನ್‌ಶಿಪ್‌ನಲ್ಲಿ ಇರೋದಾಗಿ ಸುಳಿವು ನೀಡಿದ್ದರು.
ಈ ಬೆನ್ನಲ್ಲೇ ವಿಜಯ್ ಫ್ಯಾಮಿಲಿ ಜೊತೆ ರಶ್ಮಿಕಾ ಕಾಣಿಸಿಕೊಂಡಿರೋದು ಇಬ್ಬರ ರಿಲೇಷನ್‌ಶಿಪ್ ವದಂತಿಗೆ ಪುಷ್ಠಿ ಸಿಕ್ಕಂತಾಗಿದೆ. ಮುಂದಿನ ವರ್ಷ ವಿಜಯ್ ಜೊತೆ ನಟಿ ಮದುವೆ ಬಗ್ಗೆ ಗುಡ್ ನ್ಯೂಸ್ ಕೊಡಬಹುದು ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ.