ಬಿಗ್ ಬಾಸ್ ಮನೆಯಲ್ಲಿ ಮುಗಿದಿಲ್ಲ ರವಿ ಬೆಳಗೆರೆ ಜರ್ನಿ?!
ಅಲ್ಲಿಗೆ ರವಿ ಬೆಳಗೆರೆ ಬಿಗ್ ಬಾಸ್ ಜರ್ನಿ ಮುಗಿಯಿತು ಎಂದುಕೊಳ್ಳಬೇಕಿಲ್ಲ. ಯಾಕೆಂದರೆ ಕಲರ್ಸ್ ವಾಹಿನಿ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ. ಅದರ ಬದಲು ಕಲರ್ಸ್ ವಾಹಿನಿ ತನ್ನ ಸಾಮಾಜಿಕ ಜಾಲತಾಣದಲ್ಲಿ ‘ಹೊರಗೆ ಯಾರು ಏನೇ ಹೇಳಿದರೂ ಮನೆಯಲ್ಲಿ ಏನಾಗ್ತಿದೆ ಅನ್ನೋದು ಬಿಗ್ ಬಾಸ್ ಗಷ್ಟೇ ಗೊತ್ತು. ರವಿ ಬೆಳಗೆರೆ ದೊಡ್ಮನೆಯಲ್ಲಿ ಕುಣಿದುಕೊಂಡು ಆರಾಮವಾಗಿದ್ದಾರೆ’ ಎಂದು ಬರೆದುಕೊಂಡಿದೆ.
ಈ ಹಿಂದೆ ಹಲವು ಬಾರಿ ಬಿಗ್ ಬಾಸ್ ಸ್ಪರ್ಧಿಗಳು ಆರೋಗ್ಯ ಸಮಸ್ಯೆಗೆ ತುತ್ತಾದಾಗ ಚಿಕಿತ್ಸೆ ಪಡೆದು ಶೋಗೆ ಮರಳಿದ್ದೂ ಇದೆ. ಹೀಗಾಗಿ ರವಿ ಬೆಳಗೆರೆ ಕೂಡಾ ಮರಳಿದ್ದರೂ ಅಚ್ಚರಿಯಿಲ್ಲ.