ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಶೋ ಬಿಗ್ ಬಾಸ್ ಕನ್ನಡ ಸೀಸನ್ 7 ಗೆ ಸ್ಪರ್ಧಿಯಾಗಿ ಹೋಗಿದ್ದ ಪತ್ರಕರ್ತ ರವಿ ಬೆಳಗೆರೆ ಒಂದೇ ದಿನಕ್ಕೆ ಹೊರಬಂದಿದ್ದಾರೆ.
ಲೋ ಬಿಪಿ, ಶುಗರ್ ಸಮಸ್ಯೆಯಿಂದಾಗಿ ಆರೋಗ್ಯದಲ್ಲಿ ಏರುಪೇರಾದ ಕಾರಣ ರವಿ ಬೆಳಗೆರೆ ಬೆಳ್ಳಂ ಬೆಳಿಗ್ಗೆಯೇ ಮನೆಯಿಂದ ಹೊರಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಬಿಗ್ ಬಾಸ್ ಮನೆಗೆ ಮತ್ತೆ ರವಿ ಬೆಳಗೆರೆ ಹೋಗುವುದು ಅನುಮಾನ. ಮನೆಯೊಳಗೆ ಬಂದ ತಕ್ಷಣವೇ ಅವರು ನಡೆದಾಡಲೂ ಕಷ್ಟಪಡುತ್ತಿರುವುದನ್ನು ನೋಡಿ ವೀಕ್ಷಕರು ಇವರನ್ನು ಯಾಕೆ ಸ್ಪರ್ಧಿಯಾಗಿ ಕಳುಹಿಸಿದಿರಿ ಎಂದು ಕಾಮೆಂಟ್ ಮಾಡಿದ್ದರು.