ಮಗನ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಿದ ರವಿಚಂದ್ರನ್

ಗುರುವಾರ, 8 ಆಗಸ್ಟ್ 2019 (08:58 IST)
ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತೋರ್ವ ಪುತ್ರ ವಿಕ್ರಮ್ ಈಗ ಬೆಳ್ಳಿ ತೆರೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಪುತ್ರನ ಸಿನಿಮಾ ‘ತ್ರಿವಿಕ್ರಮ’ದ ಪೋಸ್ಟರ್ ನ್ನು ರವಿಚಂದ್ರನ್ ಬಿಡುಗಡೆ ಮಾಡಿದ್ದಾರೆ.


ಈಗಾಗಲೇ ಮೊದಲ ಪುತ್ರ ಮನೋರಂಜನ್ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟಿದ್ದಾಗಿದೆ. ಇದೀಗ ರವಿಚಂದ್ರನ್ ಎರಡನೇ ಪುತ್ರನೂ ತ್ರಿವಿಕ್ರಮದ ಮೂಲಕ ಬೆಳ್ಳಿ ತೆರೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ.

ಇದು ವಿಕ್ರಮ್ ಮೊದಲ ಸಿನಿಮಾವಾಗಿರುವುದರಿಂದ ಸ್ವತಃ ಅಪ್ಪನ ಕೈಯಲ್ಲೇ ಪೋಸ್ಟರ್ ಬಿಡುಗಡೆ ಮಾಡಿಸಲಾಗಿದೆ. 2020 ರ ವೇಳೆಗೆ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ