ರಾಂಧವ ಟ್ರೈಲರ್ ನೋಡಿದ ರಿಯಲ್ ಸ್ಟಾರ್ ಉಪೇಂದ್ರ ಹೇಳಿದ್ದೇನು?

ಬುಧವಾರ, 7 ಆಗಸ್ಟ್ 2019 (08:40 IST)
ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ನಾಯಕರಾಗಿ ಅಭಿನಯಿಸಿರುವ ರಾಂಧವ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದೆ.


ಈ ಸಿನಿಮಾ ಟ್ರೈಲರ್ ವೀಕ್ಷಿಸಿದ ರಿಯಲ್ ಸ್ಟಾರ್ ಉಪೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ರೈಲರ್ ಭರವಸೆ ಹುಟ್ಟಿಸುವ ಹಾಗಿದೆ. ಒಂದು ರೀತಿಯಲ್ಲಿ ಮಗಧೀರ ಸಿನಿಮಾದಿಂದ ಸ್ಪೂರ್ತಿ ಪಡೆದ ಹಾಗಿದೆ. ಅದ್ಭುತವಾಗಿ ಮಾಡಿದ್ದಾರೆ. ಸಿನಿಮಾ ಕೂಡಾ ಇಷ್ಟೇ ಚೆನ್ನಾಗಿರುತ್ತದೆ ಎಂದುಕೊಂಡಿದ್ದೇನೆ ಎಂದು ಚಿತ್ರತಂಡಕ್ಕೆ ಶುಭ ಕೋರಿದ್ದಾರೆ ಉಪೇಂದ್ರ.

ಆಗಸ್ಟ್ 15 ರಂದು ರಾಂಧವ ಸಿನಿಮಾ ತೆರೆಗೆ ಬರಲಿದೆ. ವಿಭಿನ್ನವಾದ ಟ್ರೈಲರ್ ಈಗಾಗಲೇ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ