ಬೆಂಗಳೂರು: ರೇಣುಕಾಸ್ವಾ,ಮಿ ಮರ್ಡರ್ ಕೇಸ್ ನಲ್ಲಿ ಪವಿತ್ರಾ ಗೌಡ ಜೈಲಿನಿಂದ ಹೊರಬರುತ್ತಿದ್ದಂತೇ ತಲಘಟ್ಟದಲ್ಲಿರುವ ವಜ್ರ ಮುನೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗ ವಿಜಯಲಕ್ಷ್ಮಿ ಕೆಂಗಣ್ಣಿಗೆ ಗುರಿಯಾಗುತ್ತಾರಾ ನೋಡಬೇಕಿದೆ.
ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ನಗು ನಗುತ್ತಲೇ ಹೊರಬಂದ ಪವಿತ್ರಾ ಗೌಡ ತಾಯಿ ಜೊತೆ ತಲಘಟ್ಟದಲ್ಲಿರುವ ವಜ್ರ ಮುನೇಶ್ವರ ದೇವಾಲಯಕ್ಕೆ ತೆರಳಿದರು. ಮೊದಲು ಪವಿತ್ರ ಸ್ನಾನ ಮಾಡಿ ಬಳಿಕ ಮಡಿಯಲ್ಲೇ ದೇವರಿಗೆ ಪ್ರದಕ್ಷಿಣೆ ಹಾಕಿ ಪೂಜೆ ಸಲ್ಲಿಸಿದ್ದಾರೆ.
ಬಳಿಕ ದರ್ಶನ್ ಹೆಸರು ಹೇಳಿ ಪೂಜೆ ಮಾಡಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ನಂತರ ದರ್ಶನ್ ಮತ್ತು ಪವಿತ್ರಾ ದೂರ ದೂರವಾಗಬಹುದು ಎನ್ನಲಾಗಿತ್ತು. ಆದರೆ ಜೈಲಿನಿಂದ ಹೊರಬುರತ್ತಿದ್ದಂತೇ ಪವಿತ್ರಾ ತಮಗೆ ದರ್ಶನ್ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ದರ್ಶನ್ ವಿಚಾರಕ್ಕೇ ಪತ್ನಿ ವಿಜಯಲಕ್ಷ್ಮಿ ಮತ್ತು ಸ್ನೇಹಿತೆ ಪವಿತ್ರಾ ಗೌಡ ಕಿತ್ತಾಡಿಕೊಂಡಿದ್ದರು. ಇದೀಗ ಜೈಲಿನಿಂದ ಹೊರಬರುತ್ತಿದ್ದಂತೇ ದರ್ಶನ್ ಹೆಸರಿನಲ್ಲಿ ಪೂಜೆ ಮಾಡಿರುವುದು ವಿಜಯಲಕ್ಷ್ಮಿ ಕೆಂಗಣ್ಣಿಗೆ ಗುರಿಯಾಗುತ್ತಾ ನೋಡಬೇಕಿದೆ. ಸದ್ಯಕ್ಕೆ ದರ್ಶನ್ ಆಸ್ಪತ್ರೆಯಲ್ಲಿದ್ದು ಇದಾದ ಬಳಿಕ ಪತ್ನಿಯ ಹೊಸಕೆರೆಹಳ್ಳಿ ಅಪಾರ್ಟ್ ಮೆಂಟ್ ಗೆ ತೆರಳಲಿದ್ದಾರೆ ಎನ್ನಲಾಗಿದೆ.