ಚಾಮರಾಜನಗರ: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಮಹತ್ವದ ತೀರ್ಪಿಗೂ ಮುನ್ನಾ ನಟ ದರ್ಶನ್ ಹಿಂದಿನ ದಿನ ರಾತ್ರಿ ತಮಿಳುನಾಡು ಕಡೆ ಪ್ರಯಾಣ ಬೆಳೆಸಿದ್ದರು. ದೇವಸ್ಥಾನದ ಜಾತ್ರೆಯೊಂದರಲ್ಲಿ ಪಾಲ್ಗೊಳ್ಳಲು ದರ್ಶನ್ ತಮಿಳುನಾಡಿಗೆ ಪ್ರಯಾಣ ಬೆಳೆಸಿದ್ದು, ಇದೀಗ ದರ್ಶನ್ ಬೆಂಗಳೂರು ಕಡೆ ವಾಪಾಸ್ಸಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.
ಹೊಸಕೆರೆಹಳ್ಳಿಯಲ್ಲಿರುವ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್‌ನನ್ನು ಭೇಟಿಯಾದ ಬಳಿಕ ದರ್ಶನ್ ಅವರು ಪೊಲೀಸ್ ಮುಂದೇ ಶರಣಾಗಲಿದ್ದಾರೆ. ಸುಪ್ರೀಂ ಕೋರ್ಟ್ ಹತ್ಯೆ ಪ್ರಕರಣದ 7 ಆರೋಪಿಗಳ ಜಾಮೀನು ಅರ್ಜಿಯನ್ನು ವಜಾ ಮಾಡಿ ಆದೇಶವನ್ನು ಹೊರಡಿಸಿತ್ತು.
ಈಗಾಗಲೇ ಎ 1 ಆರೋಪಿ ಪವಿತ್ರಾ ಗೌಡ, ಎ14 ಪ್ರದೋಶ್ ಸೇರಿದಂತೆ ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದೀಗ ಇನ್ನುಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಸಿಕ್ಕಿರುವ ಮಾಹಿತಿ ಪ್ರಕಾರ ದರ್ಶನ್ ತಮ್ಮ ಕುಟುಂಬವನ್ನು ಭೇಟಿಯಾದ ಕೆಲ ಕ್ಷಣದಲ್ಲೇ ಪೊಲೀಸರ ಮುಂದೇ ಶರಣಾಗಲಿದ್ದಾರೆ ಎಂದು ತಿಳಿದುಬಂದಿದೆ.
ಜಾಮೀನು ರದ್ದು ಆದೇಶ ಹೊರಬಿದ್ದ ಬೆನ್ನಲ್ಲೇ ನಟ ದರ್ಶನ್‌ಗಾಗಿ ಪೊಲೀಸರು ಎಲ್ಲಾ ಕಡೆ ಹುಡುಕುತ್ತಿದ್ದಾರೆ. ಆರ್‌ಆರ್ ನಗರ, ಹೊಸಕೆರೆಹಳ್ಳಿ ಹಾಗೂ ಮೈಸೂರಿನ ಫಾರಂ ಹೌಸ್‌ನಲ್ಲೂ ಪೊಲೀಸರು ದರ್ಶನ್‌ಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ದರ್ಶನ್ ಎಲ್ಲೂ ಪತ್ತೆಯಾಗಿಲ್ಲ. ತೀರ್ಪಿನ ಹಿಂದಿನ ದಿನ ಅಂದರೆ ಬುಧವಾರ ಚಾಮರಾಜನಗರ ಜಿಲ್ಲೆಯ ಸುವರ್ಣಾವತಿ ಡ್ಯಾಂ ಬಳಿಯ ಟೋಲ್ ಗೇಟ್ ಮೂಲಕ ದರ್ಶನ್ ಪ್ರಯಾಣಿಸಿರುವ ವಾಹನಗಳ ವೀಡಿಯೋ ವೈರಲ್ ಆಗಿದೆ.