ರೇಣುಕಾಸ್ವಾಮಿ ಕೇಸ್‌: ಮತ್ತೇ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಆದ ಪ್ರದೋಷ್‌

Sampriya

ಗುರುವಾರ, 10 ಅಕ್ಟೋಬರ್ 2024 (16:00 IST)
Photo Courtesy X
ಬೆಳಗಾವಿ: ಹೈಕೋರ್ಟ್ ಆದೇಶದ ಬೆನ್ನಲ್ಲೇ ರೇಣುಕಾಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೋಷ್‌ನನ್ನು ಪೊಲೀಸರು ಬೆಳಗಾವಿ ಹಿಂಡಲಗಾ ಜೈಲಿನಿಂದ ಮತ್ತೇ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಂತರಿಸಿದ್ದಾರೆ.

ಇಂದು ಬಿಗಿಭದ್ರತೆಯಲ್ಲಿ ಪ್ರದೋಷ್‌ರನ್ನು ಬೆಂಗಳೂರು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್‌ ಮಾಡಲಾಯಿತು. ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ಗೆ ವಿಐ‍ಪಿ ಟ್ರೀಟ್‌ಮೆಂಟ್ ನೀಡಿದ ಹಿನ್ನೆಲೆ ಪ್ರಕರಣದ ಆರೋಪಿಗಳನ್ನು ರಾಜ್ಯದ ಬೇರೆ ಬೇರೆ ಜೈಲಿಗೆ ಶಿಫ್ಟ್‌ ಮಾಡಲಾಯಿತು. ಇನ್ನೂ ಪ್ರದೋಶ್ ಅವರು ಪರಪ್ಪನ ಅಗ್ರಹಾರದಿಂದ ಬೆಳಗಾವಿಗೆ ಶಿಫ್ಟ್ ಮಾಡಿದ ಆದೇಶದ ಬಗ್ಗೆ ಕೋರ್ಟ್‌ ಮೆಟ್ಟಿಲೇರಿದ್ದರು.

ತಮ್ಮನ್ನು ಮತ್ತೆ ಬೆಂಗಳೂರಿನ ಜೈಲಿಗೆ ಶಿಫ್ಟ್ ಮಾಡಿ ಎಂದು ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಪ್ರದೋಶ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ಈ ಪ್ರಕರಣದಲ್ಲಿ ಪ್ರದೋಷ್ ಫೋಟೋದಲ್ಲಿ ಕಾಣಿಸಿಕೊಂಡಿಲ್ಲ. ಕಠಿಣ ಸಂದರ್ಭಗಳಲ್ಲಿ ಮಾತ್ರ ಆರೋಪಿಗಳನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಬಹುದು ಎಂದು ಪ್ರದೋಷ್ ಪರ ವಾದ ಮಂಡಿಸಿದ್ದರು.

ದರ್ಶನ್ ಆರೋಪಿಯಾಗಿರಬೇಕಾದ ಪ್ರಕರಣದಲ್ಲಿ ಪ್ರದೋಷ್‌ನನ್ನು ಆರೋಪಿಯಂತೆ ಬಿಂಬಿಸಲಾಗಿದೆ. ಆದ್ದರಿಂದ ಆರೋಪಿ ಪ್ರದೂಷ್ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲು ಆದೇಶ ಹೊರಡಿಸಿದೆ.

ಆಗಸ್ಟ್ 28ರಂದು ಬೆಳಗಾವಿ ಹಿಂಡಲಗಾ ಜೈಲಿಗೆ ಪೊಲೀಸರು ಆರೋಪಿಯನ್ನು ಕರೆತಂದಿದ್ದರು. 44 ದಿನಗಳ ಬಳಿಕ ಮತ್ತೆ ಪರಪ್ಪನ ಅಗ್ರಹಾರಕ್ಕೆ  ಪ್ರದೋಶ್‌ನನ್ನು ರವಾನಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ