ಅಯೋಧ್ಯೆ ತೀರ್ಪು ಹಿನ್ನಲೆ: ರುದ್ರಪ್ರಯಾಗ ಅಡಿಷನ್ ಮುಂದಕ್ಕೆ ಹಾಕಿದ ರಿಷಬ್ ಶೆಟ್ಟಿ

ಶನಿವಾರ, 9 ನವೆಂಬರ್ 2019 (09:58 IST)
ಬೆಂಗಳೂರು: ಅಯೋಧ್ಯೆ ರಾಮಜನ್ಮಭೂಮಿ ವಿವಾದದ ಮಹಾತೀರ್ಪನ್ನು ಇಂದು ಸುಪ್ರೀಂ ಕೋರ್ಟ್ ನೀಡಲಿದ್ದು, ಈ ನಿಟ್ಟಿನಲ್ಲಿ ದೇಶದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.


ಈ ಹಿನ್ನಲೆಯಲ್ಲಿ ದೇಶದಾದ್ಯಂತ ಬಂದ್ ವಾತಾವರಣವಿದೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ವಾಹನ ಸಂಚಾರವೂ ವಿರಳವಾಗಿದೆ.

ಈ ಬಂದ್ ವಾತಾವರಣ ಸಿನಿಮಾ ರಂಗದ ಮೇಲೂ ಪರಿಣಾಮ ಬೀರಿದ್ದು, ರಿಷಬ್ ಶೆಟ್ಟಿ ತಮ್ಮ ನಿರ್ದೇಶನದ ರುದ್ರಪ್ರಯಾಗ ಸಿನಿಮಾಗಾಗಿ ಇಂದು ನಡೆಸಬೇಕಿದ್ದ ಕಲಾವಿದರ ಅಡಿಷನ್ ಕಾರ್ಯಕ್ರಮವನ್ನು ನಾಳೆಗೆ ಮುಂದೂಡಿದ್ದಾರೆ. ಇದಕ್ಕೆ ಕ್ಷಮೆಯಿರಲಿ ಎಂದು ರಿಷಬ್ ಸಾಮಾಜಿಕ ಜಾಲತಾಣದ ಮೂಲಕ ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ