ನವಂಬರ್ 15 ಕ್ಕೆ ಕುರಿ ಪ್ರತಾಪ್, ಸಾಧುಕೋಕಿಲ ಮನೆ ಮಾರಾಟಕ್ಕಿದೆ!

ಶನಿವಾರ, 9 ನವೆಂಬರ್ 2019 (09:26 IST)
ಬೆಂಗಳೂರು: ಕನ್ನಡದ ಹಾಸ್ಯ ನಟರು ಒಟ್ಟಾಗಿ ನಟಿಸಿರುವ ಮನೆ ಮಾರಾಟಕ್ಕಿದೆ ಸಿನಿಮಾ ನವಂಬರ್ 15 ರಂದು ಬಿಡುಗಡೆಯಾಗುತ್ತಿದೆ.


ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿರುವ ಕುರಿ ಪ್ರತಾಪ್, ಸಾಧು ಕೋಕಿಲ, ರವಿಶಂಕರ್ ಗೌಡ, ಚಿಕ್ಕಣ್ಣ ಹಾಗೂ ಶ್ರುತಿ ಹರಿಹರನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ ‘ಮನೆ ಮಾರಾಟಕ್ಕಿದೆ’.

ಇದೊಂದು ಹಾರರ್, ಕಾಮಿಡಿ ಸಿನಿಮಾವಾಗಿದ್ದು, ಮಂಜು ಸ್ವರಾಜ್ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಎಸ್ ವಿ ಬಾಬು ನಿರ್ಮಾಣ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ