ಮದುವೆಗೆ ಕರೆಯೋಲೆ ಹಂಚುವುದರಲ್ಲಿ ಬ್ಯುಸಿಯಾದ ನಟ ಧ್ರುವ ಸರ್ಜಾ

ಶನಿವಾರ, 9 ನವೆಂಬರ್ 2019 (09:28 IST)
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ಬಹುಕಾಲದ ಗೆಳತಿ ಪ್ರೇರಣಾ ಜತೆ ಇದೇ ತಿಂಗಳು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.


ಪ್ರೇರಣಾ ಮತ್ತು ಧ್ರುವ ಸರ್ಜಾ ಮದುವೆ ಕಾರ್ಯಕ್ರಮ ಇದೇ ತಿಂಗಳು ನವಂಬರ್ 24 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಅದೇ ದಿನ ತಮ್ಮ ಸಿನಿ ಸ್ನೇಹಿತರಿಗಾಗಿ ಆರತಕ್ಷತೆಯನ್ನೂ ನಡೆಸಲಿದ್ದಾರೆ.

ಹೀಗಾಗಿ ಮದುವೆ ಕೆಲಸದಲ್ಲಿ ಧ್ರುವ ಬ್ಯುಸಿಯಾಗಿದ್ದಾರೆ. ತಾವೇ ಖುದ್ದಾಗಿ ಅದ್ಧೂರಿ ಮದುವೆ ಆಹ್ವಾನ ಪತ್ರಿಕೆಯನ್ನು ಸ್ಯಾಂಡಲ್ ವುಡ್ ಸ್ನೇಹಿತರ ಮನೆ ಮನೆಗೆ ತೆರಳಿ ಹಂಚುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ