ರಿಷಬ್ ಶೆಟ್ರು ಸೆಂಚುರಿ ಮಾಡಿದ್ರು! ಯಾವ ವಿಚಾರದಲ್ಲಿ ಗೊತ್ತಾ?!
ಶುಕ್ರವಾರ, 28 ಡಿಸೆಂಬರ್ 2018 (09:13 IST)
ಬೆಂಗಳೂರು: ಬೆಲ್ ಬಾಟಂ ಚಿತ್ರದ ಗೌಜಿ ಗದ್ದಲದ ನಡುವೆ ನಿರ್ದೇಶಕ, ನಟ, ರಿಷಬ್ ಶೆಟ್ಟಿ ನಾನು ಸೆಂಚುರಿ ಮಾಡಿದೆ ಎಂದು ಸಂಭ್ರಮಿಸುತ್ತಿದ್ದಾರೆ. ಯಾಕೆ ಗೊತ್ತಾ?
ಕಿರಿಕ್ ಪಾರ್ಟಿ, ಸರ್ಕಾರಿ ಹಿ. ಪ್ರಾ. ಶಾಲೆ ಕಾಸರಗೋಡು ಮುಂತಾದ ಹಿಟ್ ಚಿತ್ರಗಳ ನಿರ್ದೇಶಕ ಇದೀಗ ಟ್ವಿಟರ್ ನಲ್ಲಿ ಶತಕ ದಾಖಲಿಸಿದ ಸಂಭ್ರಮದಲ್ಲಿದ್ದಾರೆ. ರಿಷಬ್ ಟ್ವಿಟರ್ ಫಾಲೋವರ್ ಗಳ ಸಂಖ್ಯೆ 100 ಕೆ. ದಾಟಿದ್ದು ಈ ಸಂಭ್ರಮಕ್ಕೆ ಕಾರಣ.
ಕನ್ನಡ ಚಿತ್ರರಂಗದಲ್ಲಿ ಒಂದು ಲಕ್ಷ ಫಾಲೋವರ್ ಗಳನ್ನು ದಾಟಿದ ಕೆಲವೇ ಕೆಲವು ಟ್ವಿಟರಿಗರ ಸಾಲಿಗೆ ಇದೀಗ ಶೆಟ್ರೂ ಸೇರಿಕೊಂಡಿದ್ದಾರೆ. ‘ಕಿರಿಕ್ ಪಾರ್ಟಿ ಸೆಂಚುರಿ ಹೊಡೀತು, ಸ.ಹಿ.ಪ್ರಾ.ಶಾ. ಕಾಸರಗೋಡು ಸೆಂಚುರಿ ಹೊಡೀತು. ಈಗ ನಿಮ್ಮೆಲ್ಲರ ಪ್ರೀತಿಯಿಂದ ಟ್ವಿಟರ್ ನಲ್ಲಿ ಸೆಂಚುರಿ ಹೊಡೆದಿದ್ದೀನಿ. ಸೆಂಚುರಿ ಎಷ್ಟೇ ಆದರೂ ಎಲ್ಲಾ ಕ್ರೆಡಿಟ್ ನಿಮಗೇ ಅರ್ಪಣೆ. ಧನ್ಯವಾದ’ ಎಂದು ರಿಷಬ್ ಟ್ವೀಟ್ ಮಾಡಿದ್ದಾರೆ.
ಇನ್ನು ರಿಷಬ್ ಒಂದು ಲಕ್ಷ ಫಾಲೋವರ್ ದಾಟಿದ್ದಕ್ಕೆ ಕಿಚ್ಚ ಸುದೀಪ್ ಸೇರಿದಂತೆ ಹಲವರು ಶುಭ ಹಾರೈಸಿ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ