ಅಭಿಮಾನಿಗಳ ಜತೆ ಟ್ವಿಟರ್ ನಲ್ಲಿ ಕಿತ್ತಾಡಿದ ಕ್ರಿಕೆಟಿಗ ಆರ್ ಅಶ್ವಿನ್
ಶುಕ್ರವಾರ, 23 ನವೆಂಬರ್ 2018 (09:15 IST)
ಚೆನ್ನೈ: ಟೀಂ ಇಂಡಿಯಾ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಟ್ವಿಟರ್ ನಲ್ಲಿ ಅಭಿಮಾನಿಗಳ ಜತೆ ಕಿತ್ತಾಡಿಕೊಂಡ ಘಟನೆ ನಡೆದಿದೆ.
ಬ್ರಿಸ್ಬೇನ್ ನಲ್ಲಿ ಮೊನ್ನೆ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯದ ವೇಳೆ ಬೌಂಡರಿ ಲೈನ್ ಗಾತ್ರದ ಬಗ್ಗೆ ಅಶ್ವಿನ್ ಟ್ವಿಟರ್ ನಲ್ಲಿ ಅಪಸ್ವರವೆತ್ತಿದ್ದರು. ಬೌಂಡರಿ ಗೆರೆ ದೊಡ್ಡದಾಯ್ತು. ಟಿ20 ಕ್ರಿಕೆಟ್ ಗೆ ಹೇಳಿ ಮಾಡಿಸಿದ್ದಲ್ಲ ಎಂದು ಅಶ್ವಿನ್ ತಗಾದೆ ತೆಗೆದಿದ್ದರು.
ಅಶ್ವಿನ್ ಟ್ವೀಟ್ ಗೆ ಅಭಿಮಾನಿಯೊಬ್ಬರು ಹಾಗಿದ್ದರೆ ನೀವು ತಂಡದಲ್ಲಿದ್ದಿದ್ದರೆ ಸಾಕಷ್ಟು ಸಿಕ್ಸರ್ ಹೊಡೆಸಿಕೊಳ್ಳುತ್ತಿದ್ದಿರಿ ಎಂದು ಟಾಂಗ್ ಕೊಟ್ಟರು. ಇದಕ್ಕೆ ಪ್ರತ್ಯುತ್ತರವಾಗಿ ಅಶ್ವಿನ್ ಆಸ್ಟ್ರೇಲಿಯಾದಲ್ಲಿ ತಮ್ಮ ಬೌಲಿಂಗ್ ರೆಕಾರ್ಡ್ ಹೇಗಿದೆ ಎಂಬುದನ್ನು ಅಂಕಿ ಅಂಶ ಸಮೇತ ತೋರಿಸಿದರು.
ಇದು ಇಷ್ಟಕ್ಕೇ ನಿಲ್ಲಲಿಲ್ಲ. ಆಸ್ಟ್ರೇಲಿಯಾದಲ್ಲಿ ಎಷ್ಟು ವಿಕೆಟ್ ಕಿತ್ತಿದ್ದೀಯಾ? ಎಂದು ಲೇವಡಿ ಮಾಡಿದರು. ಇದಕ್ಕೆ ತಿರುಗೇಟು ನೀಡಿದ ಅಶ್ವಿನ್ ಅದನ್ನೆಲ್ಲಾ ನಾನು ಗೂಗಲ್ ನಲ್ಲಿ ಹುಡುಕಿ ಹೇಳಲು ಸಾಧ್ಯವಿಲ್ಲ. ನೀವೇ ನೋಡಿಕೊಳ್ಳಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.