ಕಾಂತಾರ 2 ಬಗ್ಗೆ ಬಂತು ಮಹತ್ವದ ಮಾಹಿತಿ

ಶನಿವಾರ, 21 ಜನವರಿ 2023 (10:20 IST)
Photo Courtesy: Twitter
ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ ಕಾಂತಾರ ಸಿನಿಮಾ ಸಕ್ಸಸ್ ಆದ ಬೆನ್ನಲ್ಲೇ ಚಿತ್ರತಂಡ ಎರಡನೇ ಭಾಗಕ್ಕೆ ತಯಾರಿ ನಡೆಸಿದೆ.

ಇದೀಗ ಕಾಂತಾರ 2 ಬಗ್ಗೆ ಮಹತ್ವದ ಅಪ್ ಡೇಟ್ ಒಂದು ಸಿಕ್ಕಿದೆ. ಇದೇ ವರ್ಷ ಜೂನ್ ನಿಂದ ಕಾಂತಾರ 2 ಸಿನಿಮಾ ಶೂಟಿಂಗ್ ಆರಂಭವಾಗಲಿದೆಯಂತೆ. ಸದ್ಯಕ್ಕೆ ಚಿತ್ರತಂಡ ಕರಾವಳಿ ಭಾಗದಲ್ಲಿ ಬೀಡು ಬಿಟ್ಟು ಚಿತ್ರದ ಸ್ಕ್ರಿಪ್ಟ್ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ.

ಇದು ಕಾಂತಾರ ಮೊದಲ ಭಾಗದ ಮುಂದುವರಿದ ಭಾಗದ ಕತೆಯನ್ನೇ ಒಳಗೊಂಡಿರಲಿದೆ. ಹೀಗಾಗಿ ರಿಷಬ್ ಮುಂದಿನ ಸಿನಿಮಾ ಕಾಂತಾರ 2 ಆಗಿರಲಿದೆ ಎಂಬ ಮಾಹಿತಿಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ