ರಿಷಬ್ ಈ ಫೋಟೋ ನೋಡಿ ಜ್ಯೂ.ಎನ್ ಟಿಆರ್ ನೆನಪಾಗುತ್ತದೆ!
ಕೊಚ್ಚಿಯಿಂದ ವಿಶಾಖಪಟ್ಟಣ, ಚೆನ್ನೈ, ಮುಂಬೈ ಸೇರಿದಂತೆ ಖಾಸಗಿ ಜೆಟ್ ಏರಿ ವಿವಿಧ ನಗರಗಳಿಗೆ ಪ್ರಯಾಣ ಮಾಡುತ್ತಿದ್ದಾರೆ. ಈ ವೇಳೆ ಪತ್ನಿ ಪ್ರಗತಿ ಕೂಡಾ ರಿಷಬ್ ಗೆ ಸಾಥ್ ನೀಡಿದ್ದಾರೆ.
ರಿಷಬ್ ಪ್ರೈವೇಟ್ ಜೆಟ್ ನಲ್ಲಿರುವ ಫೋಟೋವನ್ನು ಹೊಂಬಾಳೆ ಫಿಲಂಸ್ ಹಂಚಿಕೊಂಡಿದ್ದು ಈ ಫೋಟೋ ನೋಡಿದರೆ ಥಟ್ಟನೇ ನಿಮಗೆ ತಾರಕ್ ಅಲಿಯಾಸ್ ಜ್ಯೂ.ಎನ್ ಟಿಆರ್ ನೆನಪಾಗುತ್ತಾರೆ. ಥೇಠ್ ಜ್ಯೂ.ಎನ್ ಟಿಆರ್ ಥರಾನೇ ಕಾಣ್ತಿದ್ದೀರಲ್ಲಾ ಶೆಟ್ರೇ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.