ಜ್ಯೂ.ಎನ್ ಟಿಆರ್ ಮನೆಯಲ್ಲಿದೆ ಅಪ್ಪು ಫೋಟೋ: ವೈರಲ್ ಆಯ್ತು ಫೋಟೋ

ಸೋಮವಾರ, 31 ಅಕ್ಟೋಬರ್ 2022 (08:10 IST)
Photo Courtesy: Twitter
ಹೈದರಾಬಾದ್: ಜ್ಯೂ.ಎನ್ ಟಿಆರ್ ಮನೆಯಲ್ಲಿ ಕರುನಾಡ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಫೋಟೋವಿದೆ. ಈ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪುನೀತ್ ನನ್ನ ಸ್ನೇಹಿತ ಎಂದು ತಾರಕ್ ಕೇವಲ ಬಾಯಿ ಮಾತಿಗೆ ಹೇಳಿಲ್ಲ. ತನ್ನ ಅಗಲಿದ ಸ್ನೇಹಿತನ ಫೋಟೋವನ್ನು ಮನೆಯಲ್ಲಿ ಹಾಕಿಕೊಳ್ಳುವ ಮೂಲಕ ಅಭಿಮಾನ ಮೆರೆದಿದ್ದಾರೆ.

ನಾಳೆ ನಡೆಯಲಿರುವ ಪುನೀತ್ ರಾಜ್ ಕುಮಾರ್ ಗೆ ಕರ್ನಾಟಕ ರತ್ನ ಪ್ರಶಸ್ತಿ ಸಮಾರಂಭಕ್ಕೆ ಜ್ಯೂ.ಎನ್ ಟಿಆರ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಮೊದಲು ತಾರಕ್ ಮನೆಯಲ್ಲಿರುವ ಈ ಫೋಟೋ ಅಪ್ಪು ಫ್ಯಾನ್ಸ್ ಗಮನ ಸೆಳೆದಿದ್ದು, ಸೂಕ್ತ ವ್ಯಕ್ತಿಯನ್ನೇ ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದಾಗಿ ಅಭಿಮಾನಿಗಳು ಅಭಿನಂದಿಸಿದ್ದಾರೆ.


-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ