Rishabh Shetty: ಛತ್ರಪತಿ ಶಿವಾಜಿ ಸಿನಿಮಾ ಒಪ್ಪಿಕೊಂಡ ಡಿವೈನ್ ಸ್ಟಾರ್‌ಗೆ ಕನ್ನಡಿಗರಿಂದ ನೂರಾರು ಪ್ರಶ್ನೆ

Sampriya

ಬುಧವಾರ, 4 ಡಿಸೆಂಬರ್ 2024 (17:00 IST)
Photo Courtesy X
ಬೆಂಗಳೂರು: ಕಾಂತಾರಾ ಸಿನಿಮಾದ ಬಳಿಕ ನಟ, ನಿರ್ದೇಶಕ ರಿಷಬ್ ಶೆಟ್ಟಿಯ ಇಮೇಜ್ ಬದಲಾಗಿದೆ. ರಾಷ್ಟ್ರೀಯ ಪ್ರಶಸ್ತಿಯ ಬಳಿಕ ರಿಷಬ್‌ಗೆ ಬೇರೆ ಇಂಡಸ್ಟ್ರಿಯಿಂದ ಬೇಡಿಕೆ ಹೆಚ್ಚಾಗಿದೆ. ಇದೀಗ ಕಾಂತಾರ ಪ್ರೀಕ್ವೆಲ್‌ನಲ್ಲಿ ಬ್ಯುಸಿಯಾಗಿರುವ ರಿಷಬ್ ಅವರು ನಿರ್ದೇಶಕ ಪ್ರಶಾಂತ್ ವರ್ಮಾ ಜತೆ ಜೈ ಹನುಮಾನ್ ಸಿನಿಮಾವನ್ನು ಘೋಷಣೆ ಮಾಡಿದ್ದರು.  ಇದರ ಬೆನ್ನಲ್ಲೇ ಇದೀಗ ರಿಷಬ್ ಅವರು ಬಾಲಿವುಡ್‌ನಲ್ಲಿ ಹೊಸ ಆಫರ್ ಅನ್ನು ಗಿಟ್ಟಿಸಿಕೊಂಡಿದ್ದಾರೆ.  

ಆದರೆ ರಿಷಬ್ ಶೆಟ್ಟಿಯ ನಡೆಗೆ ಕನ್ನಡ ವಿರೋಧಿ ಹಣೆಪಟ್ಟಿ ಬಂದಿದೆ. ಮಹಾರಾಜಾ ಛತ್ರಪತಿ ಶಿವಾಜಿ ಪಾತ್ರದಲ್ಲಿ ರಿಷಬ್ ಶೆಟ್ಟಿ ಅಭಿನಯಿಸುತ್ತಿರುವುದು ಈಗ ಕರ್ನಾಟಕದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಬಾಯ್ಕಾಟ್ ರಿಷಬ್ ಶೆಟ್ಟಿ ಎಂಬ ಅಭಿಯಾನವು ಶುರುವಾಗಿದೆ.  ಇನ್ನೂ ಕೆಲವರು ರಿಷಬ್ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ರಿಷಬ್ ಶೆಟ್ಟಿ ಒಬ್ಬ ಕಲಾವಿದ. ಪಾತ್ರಗಳನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ಅವರಿಗಿರುವುದರ ಜೊತೆಗೆ ರಿಷಬ್ ಶಿವಾಜಿ ಪಾತ್ರ ಮಾಡಿದರೆ ತಪ್ಪೇನು. ಉತ್ತರ ಭಾರತೀಯರಲ್ಲಿ ಶಿವಾಜಿ ಬಗ್ಗೆ ದೈವಿಕ ಭಾವನೆ ಇದೆ. ಹಿಂದೂಗಳ ರಕ್ಷಣೆಗಾಗಿ ಹೋರಾಡಿದ ಧೀರ ಅಂತ ವಾದವಿವೆ. ಶಿವಾಜಿ ಪಾತ್ರಕ್ಕೆ ರಿಷಬ್​ ಸೂಕ್ತ ಎನಿಸಿದ್ದಿಂದ ಅವರನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ ತಪ್ಪೇನಿದೆ ಎಂದು ರಿಷಬ್ ಶೆಟ್ಟಿಯ ಅಭಿಮಾನಿಗಳು ಮಾತನಾಡುತ್ತಿದ್ದಾರೆ.

ಇನ್ನೂ ಕೆಲವರು ಕರುನಾಡನ್ನು ಲೂಡಿ ಹೊಡೆಯಲು ಯತ್ನಿಸಿದವರ ಸಿನಿಮಾ ಏಕೆ ಮಾಡಬೇಕು. ಶಿವಾಜಿ ತನ್ನ ಕಾಲದಲ್ಲಿ ಶೃಂಗೇರಿ ಮಠದ ಮೇಲೆ ದಾಳಿ ಮಾಡಿದ್ದ, ಬೆಳವಡಿ ಮಲ್ಲಮ್ಮನ ಜೊತೆ ಯುದ್ಧ ಮಾಡಿ ಶಿವಾಜಿ ಸೋತಿದ್ದ.

ಶಿವಾಜಿ ಮಲ್ಲಮ್ಮನ ವಿರುದ್ಧ ಸೋತು ಕ್ಷಮೆ ಕೇಳಿದ್ದ. ಸಿನಿಮಾದಲ್ಲಿ ಕ್ಷಮೆ ಕೇಳಿದ ದೃಶ್ಯವೂ ಕೂಡ ಇರಬೇಕು ಎಂದು ಆಗ್ರಹಿಸುವುದರ ಜೊತೆಗೆ ಒಂದು ವೇಳೆ ಆ ದೃಶ್ಯವಿಲ್ಲವಾದರೆ ಸಿನಿಮಾ ಕೈಬಿಡಬೇಕು ಎಂದು ಪಟ್ಟು ಹಿಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ