ಬಾಕ್ಸ್ ಆಫೀಸ್ ನಲ್ಲಿ ರಾಬರ್ಟ್ ಅಬ್ಬರ
ಈ ಮೂಲಕ ಬಾಕ್ಸ್ ಆಫೀಸ್ ನಲ್ಲಿ ರಾಬರ್ಟ್ ದೂಳೆಬ್ಬಿಸಿದೆ. ಕರ್ನಾಟಕ ಮಾತ್ರದಲ್ಲೇ 17 ಕೋಟಿ ಗಳಿಕೆ ಮಾಡಿದೆ ಎನ್ನಲಾಗಿದೆ. ಇದರೊಂದಿಗೆ ಲಾಕ್ ಡೌನ್ ಬಳಿಕ ಬಿಡುಗಡೆಯಾದ ಸ್ಟಾರ್ ಸಿನಿಮಾವೊಂದು ಭರ್ಜರಿ ರೆಸ್ಪಾನ್ಸ್ ಪಡೆದಿದೆ. ಇನ್ನು, ನಾಳೆ, ನಾಡಿದ್ದು ವೀಕೆಂಡ್ ಇದ್ದು, ಈ ಗಳಿಕೆ ಪ್ರಮಾಣ ಹೆಚ್ಚಾಗುವ ಸಾಧ‍್ಯತೆಯಿದೆ. ಆನ್ ಲೈನ್ ನಲ್ಲೂ ಮೊದಲೇ ಟಿಕೆಟ್ ಸೋಲ್ಡ್ ಔಟ್ ಆಗಿತ್ತು. ಈ ಸಿನಿಮಾ ಮೂಲಕ ದರ್ಶನ್ ಮತ್ತೆ ತಾವು ಬಾಕ್ಸ್ ಆಫೀಸ್ ಸುಲ್ತಾನ್ ಎಂದು ಸಾಬೀತುಪಡಿಸಿದ್ದಾರೆ.